ಸೋಮವಾರಪೇಟೆ ಪಟ್ಟಣ ಪಂ. ಚುನಾವಣೆ: 29 ನಾಮಪತ್ರ ಸಲ್ಲಿಕೆ

Update: 2018-10-17 11:11 GMT

ಸೋಮವಾರಪೇಟೆ,ಅ.17: ಸೋಮವಾರಪೇಟೆ ಪಟ್ಟಣ ಪಂಚಾಯತ್ ನ 11 ವಾರ್ಡ್‍ಗಳಿಗೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ.ಪಂ. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು 6 ಹಾಗು ಜೆಡಿಎಸ್ ಅಭ್ಯರ್ಥಿಗಳು 5 ವಾರ್ಡ್‍ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 

1ನೇ ವಾರ್ಡ್‍ನಿಂದ ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯಶಂಕರ್, ಪಕ್ಷೇತರರಾಗಿ ಬಿ.ಪಿ. ಶಿವಕುಮಾರ್ ಮತ್ತು ಎಸ್.ಮಹೇಶ್, 2ನೇ ವಾರ್ಡ್ ಬಿಜೆಪಿಯಿಂದ ಪಿ.ಕೆ. ಚಂದ್ರು, ಕಾಂಗ್ರೆಸ್‍ನಿಂದ ಮಂಜುನಾಥ್, ಪಕ್ಷೇತರರಾಗಿ ರಘುನಾಥ್ ಅವರುಗಳು ನಾಮಪತ್ರ ಸಲ್ಲಿಸಿದರು.

3ನೇ ವಾರ್ಡ್ ನಿಂದ ಬಿಜೆಪಿಯಿಂದ ನಳಿನಿ ಗಣೇಶ್, ಜೆಡಿಎಸ್‍ನಿಂದ ಕೆ.ಎಂ. ಪುಷ್ಪ, ಪಕ್ಷೇತರ ಅಭ್ಯರ್ಥಿಯಾಗಿ ನೀಲಾವತಿ, 4ನೇ ವಾರ್ಡ್ ಬಿಜೆಪಿಯಿಂದ ಎನ್.ಎಸ್. ಮೂರ್ತಿ, ಕಾಂಗ್ರೆಸ್‍ನಿಂದ ಸಂಜೀವ, 5ನೇ ವಾರ್ಡ್ ಬಿಜೆಪಿಯಿಂದ ಬಿ.ಎಂ. ಸುರೇಶ್, ಕಾಂಗ್ರೆಸ್‍ನಿಂದ ಬಿ.ಸಿ. ವೆಂಕಟೇಶ್ ಅವರು ನಾಮಪತ್ರ ಸಲ್ಲಿಸಿದರು.

6ನೇ ವಾರ್ಡ್ ಬಿಜೆಪಿಯಿಂದ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್‍ನಿಂದ ಶೀಲಾ ಡಿಸೋಜ, 7ನೇ ವಾರ್ಡ್ ಬಿಜೆಪಿಯಿಂದ ದಾಕ್ಷಾಯಿಣಿ, ಜೆಡಿಎಸ್‍ನಿಂದ ಜೀವನ್, 8ನೇ ವಾರ್ಡ್ ಬಿಜೆಪಿಯಿಂದ ಪ್ರಮೋದ್, ಜೆಡಿಎಸ್‍ನಿಂದ ವೆಂಕಟೇಶ್, ಪಕ್ಷೇತರರಾಗಿ ಶುಭಕರ್ ಮತ್ತು ಮನೋಹರ್ ಅವರುಗಳು ಉಮೇದುವಾರಿಕೆ ನೀಡಿದರು.

9ನೇ ವಾರ್ಡ್ ಬಿಜೆಪಿಯಿಂದ ಅನಿತಾ, ಜೆಡಿಎಸ್‍ನಿಂದ ನಾಗರತ್ನ, 10ನೇ ವಾರ್ಡ್ ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ಬಿಜೆಪಿಯಿಂದ ದಿವ್ಯಾ ಮೋಹನ್, ಪಕ್ಷೇತರ ಅಭ್ಯರ್ಥಿಯಾಗಿ ಗೀತಾ ಹರೀಶ್, 11ನೇ ವಾರ್ಡ್ ಬಿಜೆಪಿಯಿಂದ ಬಿ.ಆರ್. ಮಹೇಶ್, ಕಾಂಗ್ರೆಸ್‍ನಿಂದ ಕೆ.ಎ. ಆದಂ ಅವರು  ನಾಮಪತ್ರ ಸಲ್ಲಿಸಿದರು. ತಾಲೂಕು ತಹಶೀಲ್ದಾರ್ ಹಾಗು ಚುನಾವಣಾಧಿಕಾರಿಯಾಗಿರುವ ಪಿ.ಎಸ್.ಮಹೇಶ್, ಉಪ ಚುನಾವಣಾಧಿಕಾರಿ ಎಚ್.ಬಿ. ಗಣೇಶ್ ಅವರು ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದರು.

ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಶಾಸಕ ಅಪ್ಪಚ್ಚು ರಂಜನ್, ಪಕ್ಷದ ಮುಖಂಡರಾದ ಬಿ.ಡಿ. ಮಂಜುನಾಥ್, ಅಭಿಮನ್ಯು ಕುಮಾರ್, ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಜೆಡಿಎಸ್ ನ ಎಸ್.ಎಂ.ಡಿಸಿಲ್ವಾ, ಜಯಾನಂದ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News