ಮಾಲ್ದೀವ್ಸ್: ಮಾಜಿ ಅಧ್ಯಕ್ಷ ಗಯೂಮ್ ದೋಷಮುಕ್ತ

Update: 2018-10-19 16:48 GMT

 ಮಾಲೆ,ಅ.19: ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಮಹ್ಮೂನ್ ಅಬ್ದುಲ್ ಗಯೂಮ್ ಅವರಿಗೆ ವಿಧಿಸಲಾಗಿದ್ದ 19 ತಿಂಗಳುಗಳ ಜೈಲು ಶಿಕ್ಷೆಯನ್ನು ಸ್ಥಳೀಯ ನ್ಯಾಯಾಲಯವು ರದ್ದುಪಡಿಸಿದೆ.

80 ವರ್ಷದ ಗಯೂಮ್ ಅವರು ಮುಸ್ಲಿಂ ಬಾಹುಳ್ಯದ ದ್ವೀಪರಾಷ್ಟ್ರವಾದ ಮಾಲ್ದೀವ್ಸ್‌ನಲ್ಲಿ 30 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. 2008ರ ಬಹುಪಕ್ಷೀಯ ಚುನಾವಣೆಯಲ್ಲಿಯೂ ಅವರು ಪರಾಭವಗೊಂಡಿದ್ದರು. ಮಾಲ್ದೀವ್ಸ್ ಅಧ್ಟಕ್ಷ ಅಬ್ದುಲ್ಲಾ ಯಾಮೀನ್ ಅವರ ಪದಚ್ಯುತಿಗಾಗಿ ನಡೆದ ಮಿಲಿಟರಿ ಬಂಡಾಯದಲ್ಲಿ ಪಾತ್ರವಹಿಸಿದ್ದರೆಂಬ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಯಾಮಿನ್ ಪರಾಭವಗೊಂಡ ಬಳಿಕ ಗಯೂಮ್‌ಗೆ ಜಾಮೀನು ಗಯೂಮ್ ಅವರಿಗೆ ಜಾಮೀನು ದೊರೆತಿತ್ತು.

ಗಯೂಮ್ ಅವರು ತನ್ನ ಮೊಬೈಲ್‌ಫೋನನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ತನಿಖೆಗೆ ಅಡ್ಡಿಪಡಿಸಿದ ಆರೋಪವನ್ನು ಹೊರಿಸಲಾಗಿತ್ತು. ಆದರೆ ಗುರುವಾರ ಅವರನ್ನು ಸ್ಥಳೀಯ ನ್ಯಾಯಾಲಯವು ಈ ಪ್ರಕರಣದಲ್ಲೂ ದೋಷಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News