ಹನೂರು: ವಿಜಯ ದಶಮಿಯ ಭವ್ಯ ಮೆರವಣಿಗೆ

Update: 2018-10-20 08:18 GMT

ಹನೂರು, ಅ.20: ವಿಜಯ ದಶಮಿಯ ಹಿನ್ನಲೆಯಲ್ಲಿ ಹನೂರಿನಲ್ಲಿ ಶುಕ್ರವಾರ ಮಹಿಷಾಸುರ ಮರ್ಧಿನಿ ದೇವಿಯ ವಿಗ್ರಹದ ಭವ್ಯ ಮೆರವಣಿಗೆ ನಡೆಯಿತು.

ಹನೂರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಅನಂತರ ಬನ್ನಿಮಂಟಪದ ಬೀದಿಯಲ್ಲಿ ವಿಧಿ ವಿಧಾನದೂಂದಿಗೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಂಡಿತು.

ಹನೂರು ಪಟ್ಟಣದಲ್ಲಿ ಸ್ಥಾಪಿಸಲಾದ ಮಹಿಷಾಸುರ ಮರ್ಧಿನಿ ದೇವತೆಯ ವಿಗ್ರಹಕ್ಕೆ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ವಿಜಯ ದಶಮಿಯೆಂದು ದೇವತೆಯ ವಿಗ್ರಹವನ್ನು ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಸಿಂಗರಿಸಿ ಮೆರವಣಿಗೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಪಟ್ಟಣದ, ಹಳೆ ಎಂಡಿಸಿಸಿ ರೋಡ್, ಖಾಸಗಿ ಬಸ್ ನಿಲ್ದಾಣ ವೃತ್ತ, ಮಾರಿಗುಡಿ ಬೀದಿ ಮುಖಾಂತರ ಸಾಗಿದ ಮೆರವಣಿಗೆ ಬನ್ನಿ ಮಂಟಪಕ್ಕೆ ಆಗಮಿಸಿತು. ಅಲ್ಲಿ ಬನ್ನಿ ಮರಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಅನಂತರ ಹಿಂದಿರುಗಿ ದೇವಸ್ಥಾನಕ್ಕೆ ತೆರಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News