ಕುಲ್ಗಾಮ್ ನಲ್ಲಿ ಮೂವರು ಉಗ್ರರ ಹತ್ಯೆ

Update: 2018-10-21 06:37 GMT

ಶ್ರೀನಗರ, ಅ.21: ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಮೃತಪಟ್ಟು  ಇಬ್ಬರು ಯೋಧರು ಗಾಯಗೊಂಡಿರುವ   ಘಟನೆ ರವಿವಾರ ನಡೆದಿದೆ. 

ಕುಲ್ಗಾಮ್ ನಲ್ಲಿ ಉಗ್ರರು  ಅಡಗಿಕೊಂಡಿರುವ ಖಚಿತ ವರ್ತಮಾನದ ಬಗ್ಗೆ ಆರ್ಮಿ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದರು. ಭದ್ರತಾ ಪಡೆಯ ಗುಂಡಿಗೆ ಬಲಿಯಾದ ಉಗ್ರರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು  ಮೃತಪಟ್ಟ ಉಗ್ರರಲ್ಲಿ ಓರ್ವ ಸ್ಥಳೀಯ ಮತ್ತು ಇಬ್ಬರು ಪಾಕಿಸ್ತಾನದವರು ಎಂದು ಪ್ರಾಥಮಿ ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಈ ವೇಳೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಅಡ್ಡಿಪಡಿಸಿದ  6 ಮಂದಿ ಸ್ಥಳೀಯ ನಾಗರಿಕರು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News