ಹನೂರು: ಮಿನತ್ತಹಳ್ಳ ಜಲಾಶಯಕ್ಕೆ ಬಾಗಿನ ಅರ್ಪಣೆ

Update: 2018-10-22 11:46 GMT

ಹನೂರು,ಅ.22: ತಾಲೂಕಿನ ಹೂಗ್ಯಂ ಬಳಿಯ ಮಿನತ್ತಹಳ್ಳ (ಯರಂಬಾಡಿ) ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹನೂರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎಮ್.ಆರ್ ಮಂಜುನಾಥ್ ಬಾಗಿನ ಅರ್ಪಿಸಿದರು. 

ಬಳಿಕ ಮಾತನಾಡಿದ ಅವರು, ಹನೂರು ಭಾಗದಲ್ಲಿ ಈ ಭಾರಿ ಉತ್ತಮ ಮಳೆಯಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 8 ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಇದರ ಸಂಪೂರ್ಣ ಅಭಿವೃದ್ದಿಗೂಳಿಸಿ ರೈತರಿಗೆ ಸಮರ್ಪಕವಾಗಿ ನೀರಾವರಿಯನ್ನು ಸೌಲಭ್ಯಗೊಳಿಸುವ ದಿಸೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ರವರ ಗಮನಕ್ಕೆ ತಂದು ಹನೂರು ಭಾಗದ ಜಲಾಶಯಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ದೊರಕಿಸಿಕೊಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು. 

ಬಹುತೇಕ ಜಲಾಶಯಗಳು ತುಂಬಿದ್ದರೂ ಕಾಲುವೆಗಳ ಸಮರ್ಪಕ ನಿರ್ವಹಣೆ ಮಾಡದೆ ನೀರು ಸಮುದ್ರದ ಪಾಲಾಗುತ್ತಿದ್ದು, ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಭಾಗದ ಶಾಸಕರಾದ ನರೇಂದ್ರ ರಾಜೂಗೌಡರವರು ಮೂರನೇ ಬಾರಿ ಗೆದ್ದರೂ ಸಹ ಈ ಭಾಗದ ರೈತರಿಗೆ ಕೈಗೆಟುಕುವ ರೀತಿಯಲ್ಲಿ ನೀರಾವರಿ ಸೌಲಭ್ಯ ದೊರಕದಿರುವುದು ಅವರ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ. ಮುಂದಿನ ದಿನಗಳಲ್ಲಿ ಜನರು ನನ್ನನ್ನು ಆಶೀರ್ವದಿಸಿದರೆ ಇನ್ನೂ ಉತ್ತಮವಾಗಿ ಜಲಾಶಯಗಳ ನಿರ್ವಹಣೆ ಮಾಡಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. 

ಈ ಸಂದರ್ಭ ಮಾಜಿ ಜಿಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಮೂರ್ತಿ, ಬಾಬು, ಹನೂರು ಪಟ್ಟಣ ಪಂಚಾಯತ್ ಸದಸ್ಯ ಬಸವರಾಜು, ಮುಖಂಡರಾದ ಸತ್ಯ ಮಂಗಲ ಮಾದೇವ, ಕಣ್ಣೂರು ಬಸವರಾಜು, ವಸಂತಕುಮಾರ್, ಮಾದರಾಜು, ರಾಜೇಶ್, ಮಿಣ್ಯ ಮಾದೇವ, ಜಡೇಸ್ವಾಮಿ ಮುನಿಯಪ್ಪ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News