ಪೇಟಿಎಂ ಮುಖ್ಯಸ್ಥರನ್ನು ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ : ಮೂವರು ಆರೋಪಿಗಳ ಸೆರೆ

Update: 2018-10-23 04:47 GMT

ನೋಯ್ಡಾ, ಅ.23: ಪೇಟಿಎಂ ಸ್ಥಾಪಕರಾಗಿರುವ ವಿಜಯ್ ಶೇಖರ್ ಶರ್ಮಾ ರನ್ನು ಬ್ಲ್ಯಾಕ್ ಮಾಡಿ 20 ಕೋಟಿ ರೂ. ಬೇಡಿಕೆ ಇಟ್ಟ ಆರೋಪದಲ್ಲಿ ಮೂವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಶರ್ಮಾರ ಮಾಜಿ ಕಾರ್ಯದರ್ಶಿ  ಹಾಗೂ ಉಪಾಧ್ಯಕ್ಷೆಯಾಗಿರುವ ಸೋನಿಯಾ ಧವನ್ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಪೊಲೀಸರು  ತಿಳಿಸಿದ್ದಾರೆ. ಪೇಟಿಎಂ ಆಡಳಿತ  ವಿಭಾಗದ  ನೌಕರರಾದ ಧವನ್ ಪತಿ ರೂಪಕ್ ಜೈನ್ ಮತ್ತು ದೇವೇಂದ್ರ ಕುಮಾರ್  ಬಂಧಿತ ಆರೋಪಿಗಳು. ಪ್ರಕರಣದ ನಾಲ್ಕನೇ  ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.  

ಸೋನಿಯಾ ಧವನ್ ಮತ್ತು ಆಕೆಯ ಸಹಚರರು   ವಿಜಯ್ ಶೇಖರ್ ಶರ್ಮಾ ಅವರಿಗೆ ಸೇರಿದ  ಲ್ಯಾಪ್ ಟಾಪ್, ಪೋನ್ ಮತ್ತು ಕಂಪ್ಯೂಟರ್ ನಲ್ಲಿರುವ ದತ್ತಾಂಶವನ್ನು ಕಳವು ಮಾಡಿದ್ದು, 20 ಕೋಟಿ ರೂ. ನೀಡದಿದ್ದರೆ ಅದನ್ನು ಸೋರಿಕೆ ಮಾಡುವುದಾಗಿ ಆರೋಪಿಗಳು ಬೆದರಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿಜಯ್ ಶಂಕರ್ ಶರ್ಮಾ ತಿಳಿಸಿದ್ದಾರೆ.

ಆರೋಪಿಗಳು ಈಗಾಗಲೇ ವಿಜಯ್ ಶಂಕರ್ ಶರ್ಮಾ ಅವರ ಸಹೋದರನಿಂದ 69 ಲಕ್ಷ ರೂ.ಗಳನ್ನು ಎಗರಿಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News