ಚಾಮರಾಜನಗರ: ಸೇತುವೆ ನಿರ್ಮಾಣಕ್ಕಾಗಿ ಶೇಖರಿಸಿಟ್ಟಿದ್ದ ಮರಳು ಕಳ್ಳತನ

Update: 2018-10-25 12:06 GMT

ಚಾಮರಾಜನಗರ,ಅ.25: ಸೇತುವೆ ಕಾಮಗಾರಿಗಾಗಿ ಶೇಖರಿಸಿದ್ದ ಮರಳನ್ನು ಕಳ್ಳರು ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ.  

ಸರ್ಕಾರವು ಸೇತುವೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಇಲಾಖೆಯಿಂದ 83 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಮುಂದಾಗಿತ್ತು. ಈ ಸೇತುವೆ ನಿರ್ಮಾಣದ ವೇಳೆ ನೀರಿನ ಅಡ್ಡಾಳದಲ್ಲಿಯೇ ಬಾರೀ ಪ್ರಮಾಣದಲ್ಲಿ ಮರಳು ಕಂಟ್ರಾಕ್ಟರ್ ಗೆ ಸಿಕ್ಕಿದ್ದು, ಈಗಾಗಿ ಇದೇ ಮರಳನ್ನು ಬಳಸಿಕೊಂಡು ಸೇತುವೆ ನಿರ್ಮಿಸಲು ಮುಂದಾಗಿದ್ದರು. 

ಕಂಟ್ರ್ಯಾಕ್ಟರ್ ಮಂಜುನಾಥ್ ಕಳೆದೆರಡು ದಿನದಿಂದ ಮರಳು ಶೇಖರಿಸಿ ಕಾಮಗಾರಿ ತಯಾರಿ ಮಾಡಿಕೊಂಡಿದ್ದಾರೆ. ಆದರೆ ರಾತ್ರೋರಾತ್ರಿ ಶೇಖರಿಸಿಟ್ಟ ಮರಳನ್ನು ಹಾಗೂ ಸೇತುವೆ ನಿರ್ಮಿಸುತ್ತಿರುವ ಸ್ಥಳದಿಂದ ಹಳ್ಳ ತೆಗೆದು ಸುಮಾರು ನೂರಾರು ಟ್ರ್ಯಾಕ್ಟರ್ ಮರಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News