ಹಳಿ ತಪ್ಪಿದ ರೈಲು: ಮೈಸೂರು-ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ

Update: 2018-10-26 15:17 GMT
ಸಾಂದರ್ಭಿಕ ಚಿತ್ರ

ಮೈಸೂರು,ಅ.26: ಪೆಟ್ರೋಲಿಯಂ ಟ್ಯಾಂಕರ್ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು-ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ ಪೆಟ್ರೋಲಿಯಂ ಟ್ಯಾಂಕರ್ ರೈಲಿನ ಚಕ್ರಗಳು ಶುಕ್ರವಾರ ಸಂಜೆ ಸುಮಾರು 4.30 ರ ಸಮಯದಲ್ಲಿ ಹಳಿತಪ್ಪಿ ಕೆಳಗೆ ಉರುಳಿದ್ದವು. ಇದರಿಂದ ಬೇರೆ ಸ್ಥಳಗಳಿಗೆ ತೆರಳಬೇಕಿದ್ದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ತಕ್ಷಣ ಜಾಗೃತರಾದ ರೈಲ್ವೆ ಇಲಾಖೆ ಸಿಬ್ಬಂದಿಗಳು ರೈಲು ಹಳಿ ತಪ್ಪಿದ್ದನ್ನು ಕ್ರೇನ್ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ಸರಿಪಡಿಸಿದರು. ಸುಮಾರು ಒಂದೂವರೆಗಂಟೆಗಳ ವರೆಗೆ ಎಲ್ಲಾ ರೈಲುಗಳು ನಿಲ್ದಾಣದಲ್ಲೇ ನಿಂತಿದ್ದವು.

ನಂತರ ಬೆಂಗಳೂರು-ಮೈಸೂರು ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಒಂದೂವರೆ ಗಂಟೆ ರೈಲುಗಳು ನಿಲ್ದಾಣದಲ್ಲೇ ನಿಂತ ಪರಿಣಾಮ ಪ್ರಯಾಣಿಕರು ಪರದಾಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News