ಅಲಹಾಬಾದ್ ಪ್ರಯಾಗ್‌ರಾಜ್ ಆದ ಬಳಿಕ ಹೆಚ್ಚಿದ ಮರು ನಾಮಕರಣ ಆಗ್ರಹ

Update: 2018-10-27 17:01 GMT

ಲಕ್ನೋ, ಅ. 27: ಅಲಹಾಬಾದ್ ಹೆಸರು ಪ್ರಯಾಗ್‌ರಾಜ್ ಆಗಿ ಬದಲಾದ ಬಳಿಕ, ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಉತ್ತರಪ್ರದೇಶದ ಹಲವು ಗುಂಪುಗಳು ನಗರ, ಪಟ್ಟಣ ಹಾಗೂ ಜಿಲ್ಲೆಗಳಿಗೆ ಮರು ನಾಮಕರಣ ಮಾಡುವ ಬೇಡಿಕೆಯನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿವೆ.

ಹೆಚ್ಚಿನ ಆಗ್ರಹಗಳು ಹಿಂದೂ ಗುಂಪಿನಿಂದ ಬಂದಿವೆ. ಮೊಗಲರ ಕಾಲದಲ್ಲಿ ನೀಡಿದ ಹೆಸರುಗಳನ್ನು ಬದಲಾಯಿಸಿ ಬೇರೆ ಹೆಸರು ಇರಿಸುವಂತೆ ಈ ಗುಂಪುಗಳು ಆಗ್ರಹಿಸಿವೆ. ಅಝಂಗಢ ಜಿಲ್ಲೆಗೆ ಆರ್ಯಮಾರ್ಗ, ಫೈಝಾಬಾದ್‌ಗೆ ಸಾಕೇತ್, ಅಲಿಗಢಕ್ಕೆ ಹರಿಭಾಗ್ ಹಾಗೂ ಮುಝಾಫರನಗರ್‌ಗೆ ಲಕ್ಷ್ಮೀನಗರ್ ಹೆಸರು ಇರಿಸುವಂತೆ ಗುಂಪುಗಳು ಕೋರಿವೆ. ಅಲಿಗಢದಲ್ಲಿ ಬಿಜೆಪಿ ನಾಯಕರು ವಾಹನಗಳಲ್ಲಿ ಸಂಚರಿಸಿ ಹರಿಭಾಗ್ ಎಂದು ಬರೆಯುತ್ತಿದ್ದಾರೆ. ಈ ಹಿಂದೆ ಲಕ್ಷ್ಮೀನಗರ ಎಂದು ಕರೆಯಲಾಗುತ್ತಿರುವ ಮುಝಪ್ಫರನಗರ್ ನ ಹೆಸರು ಬದಲಾಯಿಸುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ ಎಂದು ಬಿಜೆಪಿ ಮುಝಪ್ಫರನಗರ್ ಜಿಲ್ಲಾಧ್ಯಕ್ಷ ಸುಧೀರ್ ಸೈನಿ ತಿಳಿಸಿದ್ದಾರೆ.

ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ಮರು ನಾಮಕರಣ ಮಾಡುವಂತೆ ಬಿಹಾರದ ರಾಜ್ಯಪಾಲ ಹಾಗೂ ಉತ್ತರಪ್ರದೇಶದ ನಾಯಕ ಲಾಲಾಜಿ ಟಂಡನ್ ತನ್ನ ಪುಸ್ತಕ ‘ಅಂಖಾಹಾ ಲಕ್ನೋ’ದಲ್ಲಿ 2018 ಮೇಯಲ್ಲಿ ಆಗ್ರಹಿಸಿದ್ದರು. ಲಕ್ನೋದ ಮೂಲ ಹೆಸರು ಲಕ್ಷ್ಮಣವತಿ, ಅನಂತರ ಅದಕ್ಕೆ ಲಕ್ಷಣಪುರ ಹಾಗೂ ಲಖನವತಿ ಎಂದು ಹೆಸರಿಸಲಾಯಿತು. ಅಂತಿಮವಾಗಿ ಲಕ್ನೋ ಎಂಬ ಹೆಸರು ಬಂತು ಎಂದು ಪುಸ್ತಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News