'ಹೆಲ್ಮೆಟ್ ಕಡ್ಡಾಯ' - ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥಾ

Update: 2018-10-27 18:45 GMT

ಬಾಗೇಪಲ್ಲಿ,ಅ.27; ದ್ವಿಚಕ್ರ ವಾಹನ ಸವಾರಿದಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ಮಾಡಿ ತಮ್ಮ ಆಮೂಲ್ಯ ಪ್ರಾಣಗಳನ್ನು ಉಳಿಸಿಕೊಳ್ಳಬೇಕು ಎಂದು ಪಟ್ಟಣದ ಠಾಣೆಯ ಪಿಎಸ್‍ಐ ಪಿ.ಎಂ.ನವೀನ್  ತಿಳಿಸಿದರು.

ಅವರು ಶನಿವಾರ ಪೊಲೀಸ್ ಇಲಾಖೆ,ವಿಕಾಸ ಪದವಿ ಪೂರ್ವ ಕಾಲೇಜ್ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಹೆಲ್ಮೆಟ್ ಕಡ್ಡಾಯಗೊಳಿಸುವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿ ಆಕ್ಟೋಬರ್ 1ರಿಂದ ಜಿಲ್ಲಾಡಳಿತ ದ್ವಿಚಕ್ರ ವಾಹನ ಸವಾರಿದಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸಬೇಕಾಗಿದೆ ಎಂದು ಆದೇಶ ನೀಡಿದೆ.  ಈ ಹಿನ್ನಲೆಯಲ್ಲಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ಅನೇಕ ದ್ವಿಚಕ್ರ ವಾಹನ ಸವಾರಿದಾರರು ತಮ್ಮ ಅಮೂಲ್ಯ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಹಿಂಬದಿಯ ಸವಾರಿದಾರ ಸಹ ಹೆಲ್ಮೆಟ್ ಧರಿಸುವಂತೆ ಹೇಳಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಧರಿಸಿ ನಿಯಮಗಳನ್ನು ಪಾಲಿಸಬೇಕಾಗಿದೆ ಎಂದರು.

ವಿಕಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲ ಶಿವಣ್ಣ ಎಎಸ್‍ಐ ಮುದ್ದಪ್ಪ,ಪೇದೆಗಳಾದ ಮುರಳಿ,ಶಶಿಕುಮಾರ್,ಆನಂದ್,ವಿಕಾಸ ಪದವಿ ಕಾಲೇಜಿನ  ವೆಂಕಟಸ್ವಾಮಿ,ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವೈ.ಆರ್.ಬಯ್ಯಪರೆಡ್ಡಿ,ಅನಿಲ್‍ಕುಮಾರ್,ಸಮತ,ಶ್ರೀನಿವಾಸ,ಆಶೋಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News