ಕೆಎಸ್ಸಾರ್ಟಿಸಿಗೆ ಕೇಂದ್ರದ ‘ಶ್ರೇಷ್ಠ ಪ್ರಶಸ್ತಿ’ಯ ಗರಿ

Update: 2018-10-28 11:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಅನುಷ್ಠಾನ ಗೊಳಿಸಿರುವ ಯಶಸ್ವಿ ಉಪಕ್ರಮವಾದ ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೇವೆಗೆ, ಕೇಂದ್ರ ಸರಕಾರದ ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಕೆಎಸ್ಸಾರ್ಟಿಸಿಯು ಒಟ್ಟು 16 ಸಣ್ಣ ಹಾಗೂ ಮಧ್ಯಮ ನಗರ ಮತ್ತು ಪಟ್ಟಣಗಳಲ್ಲಿ, ಪ್ರತಿದಿನ 786 ಬಸ್ಸುಗಳನ್ನು, 11075 ಟ್ರಿಪ್‌ಗಳನ್ನು, ಕಾರ್ಯಚರಣೆ ಮಾಡಿ 5.10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಸದರಿ ಪ್ರಶಸ್ತಿಯನ್ನು ನವೆಂಬರ್ 4ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕೆಎಸ್ಸಾರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News