2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

Update: 2018-10-29 12:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.29: ಪದವಿಪೂರ್ವ ಶಿಕ್ಷಣ ಇಲಾಖೆಯು 2019ರಲ್ಲಿ ನಡೆಸಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಸ್ತಾವಿತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಾ.1ರಿಂದ 18ರ ವರೆಗೆ ಎಲ್ಲ ವಿಷಯದ ಪರೀಕ್ಷೆಗಳು ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರ ವರೆಗೆ ನಡೆಸಲು ನಿರ್ಧರಿಸಲಾಗಿದೆ.

ಯಾವಾಗ ಪರೀಕ್ಷೆ: 2019ರ ಮಾರ್ಚ್ 1- ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ, ಮಾರ್ಚ್ 2- ಎನ್‌ಎಸ್‌ಕ್ಯೂಎ ಪರೀಕ್ಷೆ, ಮಾರ್ಚ್ 3-ರವಿವಾರದ ರಜೆ, ಮಾರ್ಚ್ 4- ಮಹಾಶಿವರಾತ್ರಿ ರಜೆ, ಮಾರ್ಚ್ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್.

ಮಾರ್ಚ್ 6- ಲಾಜಿಕ್, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾರ್ಚ್ 7- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ 8- ಉರ್ದು, ಸಂಸ್ಕೃತ, ಮಾರ್ಚ್ 9- ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, ಮಾರ್ಚ್ 10-ರವಿವಾರ ರಜೆ, ಮಾರ್ಚ್ 11- ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ.

ಮಾರ್ಚ್ 12-ಭೂಗೋಳಶಾಸ್ತ್ರ, ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ, ಮಾರ್ಚ್ 13- ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 14- ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 15- ಹಿಂದಿ, ಮಾರ್ಚ್ 16- ಕನ್ನಡ, ಮಾರ್ಚ್ 17- ರವಿವಾರ, ಮಾರ್ಚ್ 18- ಆಂಗ್ಲಭಾಷೆ ಎಂದು ಪ್ರಕಟನೆ ತಿಳಿಸಿದೆ.

ಇನ್ನು ಪ್ರಕಟಿಸಿರುವ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನ.28ರೊಳಗೆ ಜಂಟಿ ನಿರ್ದೇಶಕರು(ಪರೀಕ್ಷೆ), ಪದವಿ ಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು 560012 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಪಿಯು ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News