ಆನಂದ ನ್ಯಾಮಗೌಡ ಅಭಿವೃದ್ಧಿಯ ಚಿಂತಕ: ಡಾ.ಜಿ.ಪರಮೇಶ್ವರ್

Update: 2018-10-29 15:26 GMT

ಜಮಖಂಡಿ, ಅ.29: ಜಮಖಂಡಿಯಲ್ಲಿ ಶಾಸಕ ಆಗುವ ಮೊದಲೇ ಆನಂದ ನ್ಯಾಮಗೌಡ 30 ಕೋಟಿ ರೂ.ಗಳನ್ನು ತರಿಸಿದ್ದು, ಶಾಸಕರಾದ ಬಳಿಕ ಇನ್ನಷ್ಟು ಕೆಲಸ ಮಾಡಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ಜಮಖಂಡಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ಹಾಗೂ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಸಿದ್ದು ನ್ಯಾಮಗೌಡ ಅವರು ಹಿಂದಿನಿಂದಲೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದವರು. ಅವರ ಮಗ ಕೂಡ ಶಾಸಕರಾಗುವ ಮೊದಲೇ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಸಿದ್ದು ನ್ಯಾಮಗೌಡರು ಸ್ವಂತ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಮ್ಮ ಸಮ್ಮಿಶ್ರ ಸರಕಾರ ಹಿಂದಿನ ಸರಕಾರಗಳು ರೈತರ ಸಾಲಮನ್ನಾ ಮಾಡುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದೆ. 49 ಕೋಟಿ ರೂ.ಗಳ ಸಾಲಮನ್ನಾವನ್ನು ನಮ್ಮ ಸರಕಾರ ಮಾಡಿದೆ. ಆದರೆ, ಬಿಜೆಪಿ ಇದರ ನಯಾಪೈಸೆಯ ಕೆಲಸ ಮಾಡಿಲ್ಲ. ಕೇಂದ್ರ ಸರಕಾರ ಸಾಲಮನ್ನಾ ಮಾಡುವ ಆಸಕ್ತಿ ತೋರದೇ ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಪರಮೇಶ್ವರ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News