ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಝಿಯಾಗೆ 7 ವರ್ಷಗಳ ಜೈಲು

Update: 2018-10-29 15:47 GMT

ಢಾಕಾ,ಅ.29: ತನ್ನ ದಿವಂಗತ ಪತಿಯ ಹೆಸರಿನಲ್ಲಿರುವ ದತ್ತಿನಿಧಿಯಲ್ಲಿ ಭ್ರಷ್ಟಾಷಾರವನ್ನು ನಡೆಸಿದ್ದಕ್ಕಾಗಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವೊಂದು ಸೋಮವಾರ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಖಾಲಿದಾ ಅವರು ಅಪರಿಚಿತ ಮೂಲಗಳಿಂದ ಝಿಯಾ ಚಾರಿಟೇಬಲ್ ಟ್ರಸ್ಟ್ ಫಂಡ್‌ಗೆ 375,000 ಡಾ.ಗಳನ್ನು ಪಡೆದುಕೊಳ್ಳುವಲ್ಲಿ ಪ್ರಧಾನಿಯಾಗಿ ತನ್ನ ಅಧಿಕಾರವನ್ನು ದುರುಪಯೋಗಿಸಿಕೊಂಡಿದ್ದು ಸಾಬೀತಾಗಿದೆ ಎಂದು ನ್ಯಾ.ಮುಹಮ್ಮದ್ ಅಖ್ತರುಝ್ಝಮಾನ್ ಅವರು ತೀರ್ಪಿನಲ್ಲಿ ಹೇಳಿದ್ದಾರೆ. ಪ್ರತ್ಯೇಕ ಪ್ರಕರಣವೊಂದರಲ್ಲಿ ಈಗಾಗಲೇ ಐದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಖಾಲಿದಾ ಶಿಕ್ಷೆ ಪ್ರಕಟಣೆ ಸಂದರ್ಭ ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ.

ಅಘೋಷಿತ ಮೂಲಗಳಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಇತರ ಮೂವರಿಗೂ ತಲಾ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ.

ಫೆಬ್ರವರಿಯಲ್ಲಿ ಇನ್ನೊಂದು ನ್ಯಾಯಾಲಯವು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣದಲ್ಲಿ ಖಾಲಿದಾಗೆ ಐದು ವರ್ಷಗಳ ಜೈಲುಶಿಕ್ಷೆಯನು ವಿಧಿಸಿತ್ತು.ಇವೆರಡೂ ಪ್ರಕರಣಗಳಲ್ಲಿಯ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಖಲೀದಾರ ಪಕ್ಷವು ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News