ಮಧುಮೇಹಿಗಳಿಗೆ ಭಾರತದ ಪ್ರಪ್ರಥಮ ಪರಿಶುದ್ಧ ಆರೋಗ್ಯ ಪರಿಹಾರ “ಡಿ-ಅಲೈವ್”

Update: 2018-10-29 15:53 GMT

ಮುಂಬೈ,ಅ.29: ವಿಶೇಷವಾಗಿ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪರಿಶುದ್ಧ ಆರೋಗ್ಯ ಪರಿಹಾರವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ಭಾರತದ ಪ್ರಪ್ರಥಮ ಸಂಸ್ಥೆ ಡಿ-ಅಲೈವ್ ಹೆಲ್ತ್ ಪ್ರೈ.ಲಿ.ಗೆ ಚಾಲನೆ ನೀಡಲಾಗಿದೆ. ಮುಂಬೈ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯು ಮಧುಮೇಹಿಗಳ ಅಥವಾ ಆರೋಗ್ಯಕರ ಆಹಾರವು ರುಚಿ ಹೊಂದಿರುವುದಿಲ್ಲ ಎಂಬ ಕಲ್ಪನೆಗೆ ಸವಾಲೊಡ್ಡಲಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಡಿ-ಅಲೈವ್ ಉತ್ಪನ್ನಗಳು ಶೇ.100 ನೈಸರ್ಗಿಕವಾಗಿರುತ್ತವೆ. ಇವುಗಳನ್ನು ಅತ್ಯುನ್ನತ ಮಟ್ಟದ ಜೈವಿಕ ಪದಾರ್ಥಗಳಿಂದ ತಯಾರಿಸಲಾಗಿರುತ್ತದೆ. ಅಂಟು (ಗ್ಲುಟನ್) ರಹಿತವಾದ ಈ ಆಹಾರಗಳಲ್ಲಿ ಅತ್ಯಂತ ಕಡಿಮೆ ಗ್ಲೈಸೆಮಿಕ್ಸ್ ಹೊಂದಿರುವ ಸಿಹಿಕಾರಕಗಳಾದ ಸ್ಟಿವಿಯ, ತೆಂಗಿನ ಸಕ್ಕರೆ ಮುಂತಾದ ನೈಸರ್ಗಿಕ ಸಿಹಿಕಾರಕಗಳನ್ನು ಬಳಸಲಾಗುತ್ತದೆ ಮತ್ತು ಅತ್ಯಾಧುನಿಕ ಮೋಡಿಫೈಡ್ ಅಟ್ಮೋಸ್ಫಿಯರ್ ಪ್ಯಾಕೇಜಿಂಗ್ ತಂತ್ರಜ್ಞಾನದಿಂದ ಪ್ಯಾಕ್ ಮಾಡಲ್ಪಟ್ಟಿರುತ್ತವೆ ಎಂದು ಅವರು ತಿಳಿಸಿದ್ದಾರೆ.

ಡಿ-ಅಲೈವ್‌ನಲ್ಲಿ ದೊರೆಯುವ ಎಲ್ಲ ಉತ್ಪನ್ನಗಳು ಅತ್ಯುತ್ತಮಕ್ಕಿಂತಲೂ ಉತ್ತಮವಾಗಿದೆ. ಯಾಕೆಂದರೆ ಈ ಉತ್ಪನ್ನಗಳನ್ನು ಮೊದಲು ಮಧುಮೇಹಿಯಾಗಿರುವ ನನ್ನ ತಂದೆಗಾಗಿ ತಯಾರಿಸಲಾಗಿರುತ್ತದೆ. ನಂತರ ಇತರರಿಗೆ ವಿತರಿಸಲಾಗುತ್ತದೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಇಒ ಸರ ಕಪಸಿ ತಿಳಿಸಿದ್ದಾರೆ. ಹಬ್ಬದ ದಿನಗಳಲ್ಲಿ ಮಧುಮೇಹಿಗಳು ಸಿಹಿ ತಿನ್ನಲು ಚಡಪಡಿಸುವುದನ್ನು ತಪ್ಪಿಸಲು ಮೊದಲಿಗೆ ನಾವು ಭಾರತೀಯ ಸಿಹಿತಿಂಡಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ. ಇವುಗಳಲ್ಲಿ, ಮಾಯಿ ಕ ಲಡ್ಡು, ಕಾಯಿಸಿದ ಕಡಲೆಕಾಯಿ ಲಡ್ಡು, ಗೋಡಂಬಿ ಪಿಸ್ತ ಪ್ರಲೈನ್ ಮತ್ತು ಎನರ್ಜಿ ಪಾಕ್ ಪ್ರಮುಖವಾದವು ಎಂದು ಕಪಸಿ ತಿಳಿಸಿದ್ದಾರೆ. ಸದ್ಯ ಡಿ-ಅಲೈವ್ ಉತ್ಪನ್ನಗಳು ನಗರದ 25 ಪ್ರಮುಖ ಅಂಗಡಿಗಳಲ್ಲಿ ಲಭ್ಯವಿದ್ದು ಆನ್‌ಲೈನ್ ಮೂಲಕವೂ ಖರೀದಿಸಬಹುದಾಗಿದೆ ಎಂದು ಉತ್ಪಾದಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News