ಕೊಳ್ಳೇಗಾಲ: ನಾಲೆಗೆ ಬಿದ್ದು ತಾಯಿ-ಮಗಳು ಮೃತ್ಯು

Update: 2018-11-02 18:36 GMT

ಕೊಳ್ಳೇಗಾಲ, ನ.2: ಕಾಲು ಜಾರಿ ನಾಲೆಗೆ ಬಿದ್ದು ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವನಸಮುದ್ರದ ಬಳಿ ನಡೆದಿದೆ.

ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಮಮತಾ(35), ದರ್ಶಿನಿ(17) ಸಾವನ್ನಪ್ಪಿದವರು.

ತಾಲೂಕಿನ ಶಿವನಸಮುದ್ರಕ್ಕೆ ಆಗಮಿಸಿದ ತಾಯಿ-ಮಗಳು ಮಾರಮ್ಮ ದೇವಾಲಯದ ಪಕ್ಕದಲ್ಲಿ ನೀರು ರಸವಾಗಿ ಹರಿಯುವ ಚಾನೆಲ್‌ಗೆ ಕೈಕಾಲು ತೊಳೆಯಲು ಹೋಗಿ ಕಾಲು ಜಾರಿ ಬಿದ್ದಿದ್ದು, ಮೃತ ದೇಹವು ಪಯೋನಿಯರ್ ಪವರ್ ಪ್ರಾಜೆಕ್ಟ್ ಬಳಿಯ ನಾಲೆಯಲ್ಲಿ ಸಿಕ್ಕಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸರಕಾರಿ ಉಪವಿಭಾಗ ಆಸ್ಪತ್ರೆಗೆ ಶವವನ್ನು ತರಲಾಯಿತು. ಶವಪರೀಕ್ಷೆ ನಡೆಸಿದ ನಂತರ ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿದರು.

ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಘಟನಾ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಸರಕಾರಿ ಆಸ್ಪತ್ರೆಯ ಬಳಿ ಶಾಸಕ ಮಹೇಶ್ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News