ದಾವಣಗೆರೆ: ನ.12ರಿಂದ ರಾಷ್ಟ್ರಮಟ್ಟದ ಸಿಬಿಎಸ್‍ಇ ಅಥ್ಲೆಟಿಕ್ಸ್ ಕ್ರೀಡಾಕೂಟ

Update: 2018-11-11 17:38 GMT

ದಾವಣಗೆರೆ,ನ.11: ರಾಜ್ಯದಲ್ಲೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಸಿಬಿಎಸ್‍ಇ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನ.12 ರಿಂದ 16ರವರೆಗೆ ನಗರದ ಹೊರವಲಯದಲ್ಲಿರುವ ತೋಳಹುಣಸೆ ಪಾರ್ವತಮ್ಮ ಆಂಗ್ಲ ಮಾಧ್ಯಮ ವಸತಿಯುತ ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದು ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು ತಿಳಿಸಿದರು. 

ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲ ಬಾರಿಗೆ, ದಕ್ಷಿಣ ಭಾರತದಲ್ಲಿ ಎರಡನೇ ಬಾರಿಗೆ ಈ ರೀತಿಯ ಕ್ರೀಡಾಕೂಟ ಆಯೋಜನೆಯಾಗುತ್ತಿದೆ. ಥ್ರೋಯಿಂಗ್, ಜಂಪಿಂಗ್, ರನ್ನಿಂಗ್ ಸೇರಿದಂತೆ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ 20 ಸಿಬಿಎಸ್‍ಇ ಕ್ಲಸ್ಟರ್ ಹಾಗೂ 7 ಗಲ್ಫ್ ರಾಷ್ಟ್ರಗಳಿಂದ ಸುಮಾರು 4000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.

ಅಂದು ಸಂಜೆ 5 ಗಂಟೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಶಾಲೆ ಅಧ್ಯಕ್ಷ ಎಸ್.ಎಸ್.ಗಣೇಶ್
ಅಧ್ಯಕ್ಷತೆ ವಹಿಸುವರು. ಭಾರತದ ನೆಟ್‍ಬಾಲ್ ಟೀಮ್‍ನ ಉಪನಾಯಕ ನಿತಿನ್, ಸಿಬಿಎಸ್‍ಇ ರಿಜಿನಲ್ ಆಫೀಸರ್ ಕೆ.ಶ್ರೀನಿವಾಸನ್, ಎಸ್ಪಿ ಆರ್.ಚೇತನ್, ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಮಾನಂದ, ಖಚಾಂಚಿ ಎ.ಸಿ.ಜಯಣ್ಣ, ಆಡಳಿತ ಮಂಡಳಿ ಸದಸ್ಯ ಎ.ಎಸ್.ವೀರಣ್ಣ, ಶಾಲೆ ನಿರ್ದೇಶಕ ಕೆ.ಇಮಾಂ, ಕೈಗೋರಿಕೋದ್ಯಮಿ ಅಭಿಜಿತ್ ಅತಿಥಿಗಳಾಗಿ ಆಗಮಿಸುವರು. ಉದ್ಘಾಟನಾ ಕಾರ್ಯಕ್ರಮದ ನಂತರ ಜಾನಪದ ತಂಡದವರಿಂದ ಸಾಂಸ್ಕೃತಿಕ ಪ್ರದರ್ಶನ ಜರುಗಲಿದೆ ಎಂದು ಅವರು ತಿಳಿಸಿದರು.

ಪ್ರಾಂಶುಪಾಲೆ ಜೆ.ಎಸ್.ವನಿತಾ, ಉಮಾಪತಿ, ಶಾಂತಕುಮಾರ್ ಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News