ಫ್ರಾನ್ಸ್‌ನಲ್ಲಿ ಭಾರತೀಯ ಯುದ್ಧ ಸ್ಮಾರಕ ಅನಾವರಣ

Update: 2018-11-11 17:42 GMT

ಪ್ಯಾರಿಸ್,ನ.11: ಫ್ರಾನ್ಸ್‌ನ ಸ್ವಾತಂತ್ರ್ಯಕ್ಕಾಗಿ ಮೊದಲನೆ ಜಾಗತಿಕ ಮಹಾಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಮಡಿದ ನೂರಾರು ಭಾರತೀಯ ಯೋಧರ ಸ್ಮರಣಾರ್ಥ ಉತ್ತರ ಫ್ರಾನ್ಸ್‌ನಲ್ಲಿ ಭಾರತ ನಿರ್ಮಿಸಿರುವ ಯುದ್ಧ ಸ್ಮಾರಕವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರವಿವಾರ ಉದ್ಘಾಟಿಸಿದ್ದಾರೆ.

  ಶುಕ್ರವಾರದಿಂದ ಮೂರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿರುವ ವೆಂಕಯ್ಯ ನಾಯ್ಡು ಅವರು ರವಿವಾರ ವಿಲ್ಲೆರ್ಸ್‌-ಗುಯಿಸ್ಲೆನ್ ಪಟ್ಟಣದಲ್ಲಿ ಭಾರತೀಯ ಯುದ್ಧ ಸ್ಮಾರಕವನ್ನು ಅನಾವರಣಗೊಳಿಸಿದರು.

‘‘ ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸ್ಮಾರಕವನ್ನು ಅನಾವರಣಗೊಳಿಸಲು ಅತೀವ ಸಂತಸವಾಗಿದೆ. ವಿಶ್ವದಾದ್ಯಂತ ಮನ್ನಣೆ ಪಡೆದಿರುವ ಸಾವಿರಾರು ಭಾರತೀಯ ಯೋಧರ ಶೌರ್ಯ ಹಾಗೂ ಸಮರ್ಪಣಾ ಮನೋಭಾವಕ್ಕೆ ಸಲ್ಲಿಸಲಾದ ಮಹಾನ್ ಶ್ರದ್ಧಾಂಜಲಿ ಇದಾಗಿದೆ’’ ಎಂದು ನಾಯ್ಡು ಟ್ವೀಟಿಸಿದ್ದಾರೆ.

 ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 2018ರ ಜೂನ್‌ನಲ್ಲಿ ಪ್ಯಾರಿಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಯುದ್ಧ ಸ್ಮಾರಕದ ನಿರ್ಮಾಣವನ್ನು ಘೋಷಿಸಿದ್ದರು.

 ಭಾರತೀಯ ಯೋಧರು ಫ್ರಾನ್ಸ್, ಬೆಲ್ಜಿಯಂ, ಯೆಡನ್, ರ್ಪೂ ಆಫ್ರಿಕ, ಗಲಿಪೊಲಿ, ಈಜಿಪ್ಟ್, ಫೆಲೆಸ್ತೀನ್, ಪರ್ಷಿಯ ಸೇರಿದಂತೆ ವಿಶ್ವದಾದ್ಯಂತ ಹೋರಾಡಿದ್ದಾರೆ. ಈ ಭಾರತೀಯ ಯೋಧರ ಬಲಿದಾನದಿಂದಾಗಿ ಫ್ರೆಂಟ್ ಮಣ್ಣು ಹಾಗೂ ಸಮಾಜದ ಜೊತೆಗೆ ಭಾರತವು ಬಾಂಧವ್ಯವನ್ನು ಹಂಚಿಕೊಂಡಿದೆಯೆಂದು ನಾಯ್ಡು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News