ಪಾಕ್ ಹಾಕಿ ತಂಡಕ್ಕೆ ಪ್ರಾಯೋಜಕರು ಲಭ್ಯ

Update: 2018-11-12 18:42 GMT

ಕರಾಚಿ, ನ.12: ಕ್ರಿಕೆಟ್ ಫ್ರಾಂಚೈಸಿಯೊಂದರ ಮಾಲಕರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನ ಹಾಕಿ ಫೆಡರೇಶನ್‌ಗೆ(ಪಿಎಚ್‌ಎಫ್)ಪ್ರಾಯೋಜಕತ್ವ ನೀಡಲು ಮುಂದಾಗುವ ಮೂಲಕ ಪಾಕಿಸ್ತಾನ ತಂಡ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಇದ್ದ ಎಲ್ಲ ಸಂಶಯ ಕೊನೆಗೂ ದೂರವಾಗಿದೆ.

ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿ ಪೇಶಾವರ ಝಲ್ಮಿ ಮಾಲಕ ಜಾವೇದ್ ಅಫ್ರಿದಿ ಪಿಎಚ್‌ಎಫ್‌ನೊಂದಿಗೆ 2020ರ ತನಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಪಿಎಚ್‌ಎಫ್ ಕಾರ್ಯದರ್ಶಿ ಶಹಬಾಝ್ ಅಹ್ಮದ್ ಮಾಹಿತಿ ನೀಡಿದ್ದಾರೆ.

ಪ್ರಾಯೋಜಕತ್ವ ಒಪ್ಪಂದದಲ್ಲಿ ದೇಶೀಯ ಹಾಕಿಯ ಜೊತೆಗೆ ಹಿರಿಯ ಹಾಗೂ ಕಿರಿಯ ರಾಷ್ಟ್ರೀಯ ತಂಡಗಳ ಅಂತರ್‌ರಾಷ್ಟ್ರೀಯ ಪಂದ್ಯಗಳು ಒಳಗೊಂಡಿವೆ.

2014ರ ಡಿಸೆಂಬರ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆಅರ್ಹತೆ ಪಡೆದ ಸಂದರ್ಭದಲ್ಲಿ ಪಾಕಿಸ್ತಾನ ಹಾಕಿ ತಂಡ ಭುವನೇಶ್ವರದಲ್ಲಿ ಕೊನೆಯ ಬಾರಿ ಆಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News