ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು

Update: 2018-11-14 14:51 GMT

ಬೆಂಗಳೂರು, ನ.14: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಜನಾರ್ದನ್ ರೆಡ್ಡಿಗೆ 1ನೆ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. ಮಂಗಳವಾರ ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾದೀಶ ಜಗದೀಶ್ ಬುಧವಾರ ತೀರ್ಪು ಕಾಯ್ದಿರಿಸಿದ್ದರು.

ಬುಧವಾರ ತೀರ್ಪು ಪ್ರಕಟಿಸಿರುವ 1ನೆ ಎಸಿಎಂಎಂ ನ್ಯಾಯಾಲಯ ಜನಾರ್ದನ್ ರೆಡ್ಡಿಗೆ 1ಲಕ್ಷ ರೂ. ಭದ್ರತಾ ಬಾಂಡ್‌ನೊಂದಿಗೆ, ಇಬ್ಬರ ಶ್ಯೂರಿಟಿ ಪಡೆದು ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ರಘುರಾಮ ರೆಡ್ಡಿ ಹಾಗೂ ನಂಜುಡ ರೆಡ್ಡಿ ಷರತ್ತು ಬದ್ಧ ಜಾಮೀನಿಗೆ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ.

ಅರ್ಜಿದಾರರ ಪರ ವಾದ ಮಂಡನೆ ಮಾಡಿರುವ ವಕೀಲ ಹನುಮಂತರಾಯ ಆ್ಯಂಬಿಡೆಂಟ್‌ಗೂ ಗಾಲಿ ಜನಾರ್ದನ್ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು. ಮತ್ತೆ ರೆಡ್ಡಿ ವಿರುದ್ಧ ಯಾರು ಸಹ ದೂರು ನೀಡಿರುವುದಿಲ್ಲ ಎಂಬುದನ್ನು ಗಮನಿಸಿ ಕೋರ್ಟ್ ರೆಡ್ಡಿಗೆ ಜಾಮೀನು ಮಂಜೂರು ಮಾಡಿದೆ ಎಂದು ಅವರ ಪರ ವಕೀಲ ಚಂದ್ರಶೇಖರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News