ಪ್ರವಾದಿ ನಿಂದನೆ: ಸಂತೋಷ್ ತಮ್ಮಯ್ಯ ವಿರುದ್ಧ ಪಾಲಿಬೆಟ್ಟದಲ್ಲಿ ಪ್ರತಿಭಟನೆ

Update: 2018-11-15 07:23 GMT

ಸಿದ್ದಾಪುರ (ಕೊಡಗು), ನ.15: ಪ್ರವಾದಿ ವಿರುದ್ದ ಅವಹೇಳನಕಾರಿ ಭಾಷಣ ಮಾಡಿರುವ ಸಂತೋಷ್ ತಮ್ಮಯ್ಯ ವಿರುದ್ಧ ವಿವಿಧ ಮುಸ್ಲಿಮ್ ಸಂಘಟನೆಗಳು ಪಾಲಿಬೆಟ್ಟದ ಬಸ್ ತಂಗುದಾಣದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮುನೀರ್ ಫೈಝಿ, ಪ್ರವಾದಿ ಬಗ್ಗೆ ಪತ್ರಕರ್ತ ಸಂತೋಷ್ ತಮ್ಮಯ್ಯ ಹಗುರವಾಗಿ ಮಾತನಾಡಿದ್ದು, ಮುಸ್ಲಿಮ್ ಸಮುದಾಯಕ್ಕೆ ಅತೀವ ನೋವು ನಂದಿದೆ. ಇತಿಹಾಸ ಮತ್ತು ಚರಿತ್ರೆ ಅರಿಯದೆ ಮಾತನಾಡುವ ಬದಲಿ ಪ್ರವಾದಿಯ ಚರಿತ್ರೆ ತಿಳಿದು ಮಾತನಾಡಲಿ ಎಂದರು.

ಪ್ರವಾದಿ ಬಗ್ಗೆ ಮುಸ್ಲಿಮರು ಬರೆದ ಚರಿತ್ರೆ ಒಪ್ಪಲು ಸಾಧ್ಯವಿಲ್ಲದೆ ಇದ್ದರೆ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ನಾರಾಯಣ ಗುರುಸ್ವಾಮಿ ಮುಂತಾದವರು ಪ್ರವಾದಿ ಬಗ್ಗೆ ಬರೆದಿರುವ ಚರಿತ್ರೆಯನ್ನಾದರೂ ಓದಿ ತಿಳಿದುಕೊಳ್ಳಲಿ ಎಂದರು.

ಸಂತೋಷ್ ತಮ್ಮಯ್ಯ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು. ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಾಮಾಜಿಕ ಕಾರ್ಯಕರ್ತ ಮುಸ್ತಫ ಸಿದ್ದಾಪುರ ಮಾತನಾಡಿ, ಪ್ರವಾದಿ ಅವಹೇಳನ ಸಹಿಸಲಾಗದು ಎಂದರು.
 ಈ ಸಂದರ್ಭ ಆಬಿದ್, ರವೂಫ್, ರಶೀದ್, ಫೈಝಲ್, ಅಂದಾಯಿ, ರಫೀಕ್ ಮತ್ತು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News