ರಾಜಸ್ಥಾನ ಚುನಾವಣೆ : ಮೊದಲ ಬಾರಿ ಸಚಿನ್ ಪೈಲೆಟ್ ಕಣಕ್ಕೆ

Update: 2018-11-15 08:35 GMT

ಹೊಸದಿಲ್ಲಿ, ನ.15: ಮುಂಬರುವ ರಾಜಸ್ಥಾನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲೆಟ್ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಚಿನ್ ಪೈಲೆಟ್ ಇದೇ ಮೊದಲ ಬಾರಿ ವಿಧಾನ ಸಭೆಗೆ ಸ್ಪರ್ಧಿಸುತ್ತಿದ್ದಾರೆ. ಮಾಜಿ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್  ಮತ್ತು ಸಚಿನ್ ಪೈಲೆಟ್ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

“ ನಾನು ಮತ್ತು ಗೆಹ್ಲೋಟ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ. ಇತರ ನಾಯಕರು ಸ್ಪರ್ಧಿಸುದಿದ್ದರೆ ಅವರಿಗೆ ಸ್ವಾಗತ. ನಾನು  ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ  ರಾಹುಲ್ ಗಾಂಧಿ ಮತ್ತು ಗೆಹ್ಲೋಟ್  ಅವರ ಸಲಹೆ ಮೇರೆಗೆ ವಿಧಾನ ಸಭಾ  ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ” ಎಂದು ಸಚಿನ್ ಪೈಲೆಟ್  ತಿಳಿಸಿದ್ದಾರೆ. ವಿಧಾನ ಸಭಾ ಚುನಾವಣೆ ಡಿ.7ರಂದು ನಡೆಲಿದೆ.

ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದ ಗೆಹ್ಲೋಟ್ ಸರ್ದಾರ್ ಪುರ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಅವರು ನಾಲ್ಕು ಬಾರಿ ಜಯ ಗಳಿಸಿದ್ದಾರೆ. ಆದರೆ ಸಚಿನ್ ಪೈಲೆಟ್ ಸ್ಪರ್ಧಿಸಲಿರುವ ಕ್ಷೇತ್ರ ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News