ಸುಪ್ರೀಂ ಆದೇಶ ಪಾಲನೆಗೆ ಹೆಚ್ಚಿನ ಸಮಯಾವಕಾಶ ಕೇಳುವಂತೆ ವಿಪಕ್ಷ ಕಾಂಗ್ರೆಸ್ , ಬಿಜೆಪಿ ಕೇರಳ ಸರಕಾರಕ್ಕೆ ಸಲಹೆ

Update: 2018-11-15 09:10 GMT

ತಿರುವನಂತಪುರ, ನ.15: ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ  ಮಹಿಳೆಯರಿಗೂ ಪ್ರವೇಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಸಮಯಾವಕಾಶ ಕೇಳುವಂತೆ ಕೇರಳ ಸರಕಾರಕ್ಕೆ ವಿಪಕ್ಷಗಳಾದ ಕಾಂಗ್ರೆಸ್ ಮತ್ತು  ಬಿಜೆಪಿ ಸಲಹೆ ನೀಡಿದೆ.

ಮಕರವಿಳಕ್ಕುಂ ಪೂಜೆಗಾಗಿ ನವೆಂಬರ್ 17ರಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲಿದೆ. ಸುಪ್ರೀಂ ಕೋರ್ಟ್ ನ  ಆದೇಶದ ಅನುಷ್ಠಾನದ ಹಿನ್ನೆಲೆಯಲ್ಲಿ ಚರ್ಚಿಸಲು ಮುಖ್ಯ ಮಂತ್ರಿ ಪಿಣರಾಯ್ ವಿಜಯ್ ನೇತೃತ್ವದಲ್ಲಿ ಗುರುವಾರ ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳು  ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ಹೆಚ್ಚಿನ ಸಮಯಾವಕಾಶ ಕೇಳುವಂತೆ ಕೇರಳ ಸರಕಾರಕ್ಕೆ  ಸಲಹೆ ನೀಡಿವೆ.

 ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ ನಂತರ ಮೂರನೇ ಬಾರಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದು, ಈ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು 10 ರಿಂದ 50 ವರ್ಷದ ಸುಮಾರು 600 ಮಹಿಳೆಯರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ  ಎಂದು ತಿಳಿದು ಬಂದಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News