ಜಮಾಅತೆ ಇಸ್ಲಾಮೀ ಹಿಂದ್‍ನಿಂದ ಪ್ರವಾದಿ ಮುಹಮ್ಮದ್ (ಸ) ಕುರಿತು ಜಾಗೃತಿ ಅಭಿಯಾನ

Update: 2018-11-15 18:43 GMT

ಶಿವಮೊಗ್ಗ, ನ. 15: ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕವು 'ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ' ಎಂಬ ಧ್ಯೇಯ ವಾಕ್ಯದಡಿ ನ.16 ರಿಂದ 30 ರವರೆಗೆ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‍ನ ಜಿಲ್ಲಾ ಸದಸ್ಯ ಶೇಖ್ ಮಹಮ್ಮದ್ ಇಲಿಯಾಸ್ ತಿಳಿಸಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರವಾದಿ ಮೊಹಮ್ಮದ್‍ರ ಸಂದೇಶ ಮತ್ತು ಬೋಧನೆಗಳು ಸರ್ವ ಮಾನವ ಕುಲಕ್ಕೆ ಪ್ರಸ್ತುತ ಎಂಬುವುದನ್ನು ಸಾರ್ವಜನಿಕರಿಗೆ ಪರಿಚಯಿಸುವ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು. 

ಇದರ ಅಂಗವಾಗಿ ರಾಜ್ಯಾದ್ಯಂತ ಬೃಹತ್ ಸಮ್ಮೇಳನ, ವಿಚಾರಗೋಷ್ಠಿಗಳು, ವಸ್ತು ಪ್ರದರ್ಶನ, ಸಾಮಾಜಿಕ ಕಾರ್ಯ ಚಟುವಟಿಕೆಗಳಾದ ಸ್ವಚ್ಚತಾ ಅಭಿಯಾನ, ಸಸಿ ನೆಡುವುದು, ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಕ್ವಿಝ್ ಸ್ಪರ್ಧೆ, ಸೌಹಾರ್ದ ಮಾನವ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಅಭಿಯಾನದ ಅಂಗವಾಗಿ ಶಿವಮೊಗ್ಗದಲ್ಲಿ ಧಾರ್ಮಿಕ ವಿದ್ವಾಂಸರನ್ನು ಭೇಟಿಯಾಗಿ, ಖುತ್ಬಾ ಜುಮುಆದ ಪ್ರತಿ ನೀಡಿ ಅವರಿಂದ ಶುಕ್ರವಾರದಂದು ಪ್ರವಚನ ಮಾಡಿಸಲು ಪ್ರಯತ್ನಿಸಲಾಗುವುದು. ನ.22 ರ ಸಂಜೆ 6. 45 ಕ್ಕೆ ಕರ್ನಾಟಕ ಸಂಘದಲ್ಲಿ 'ಸೀರತ್ ಪ್ರವಚನ ಕಾರ್ಯಕ್ರಮ ಹಾಗೂ 30ರ ಸಂಜೆ 7 ಗಂಟೆಗೆ ಬೈಪಾಸ್ ರಸ್ತೆಯಲ್ಲಿರುವ ಗ್ಯಾಲಕ್ಸಿ ಹಾಲ್‍ನಲ್ಲಿ ಬಾಂಧವರಿಗಾಗಿ ಸಾರ್ವಜನಿಕ ಸಭೆ ಸೇರಿದಂತೆ ಹಲವರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. 

ಗೋಷ್ಠಿಯಲ್ಲಿ ಅಬ್ದುಲ್ ವಹಾಬ್, ಇಸ್ರಾರ್ ಅಹ್ಮದ್, ನಾಸಿರ್ ಅತಿಮ್, ಅಕಿಲ್ ಅಹಮ್ಮದ್, ಇಕ್ಬಾಲ್ ಖಾದ್ರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News