ಪಂಜಾಬ್ ತಂಡದಿಂದ ಯುವರಾಜ್, ಅಕ್ಷರ್ ಪಟೇಲ್, ಫಿಂಚ್ ಹೊರಕ್ಕೆ

Update: 2018-11-15 18:52 GMT

ಮೊಹಾಲಿ, ನ.15: ಭಾರತದ 2011ರ ವಿಶ್ವಕಪ್ ವಿಜೇತ ತಂಡದ ಹೀರೊ ಯುವರಾಜ್ ಸಿಂಗ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಹಾಗೂ ಆಸ್ಟ್ರೇಲಿಯದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಆ್ಯರೊನ್ ಫಿಂಚ್‌ರನ್ನು ಕಿಂಗ್ಸ್ ಇಲೆೆವೆನ್ ಪಂಜಾಬ್ ತಂಡ 2019ರ ಐಪಿಎಲ್ ಆಟಗಾರರ ಹರಾಜಿಗೆ ಮೊದಲು ತಂಡದಿಂದ ಕೈಬಿಟ್ಟಿದೆ. ಕಳೆದ ಋತುವಿನಲ್ಲಿ ಪಂಜಾಬ್ ಪರ 8 ಪಂದ್ಯಗಳನ್ನು ಆಡಿದ್ದ 36ರ ಹರೆಯದ ಯುವರಾಜ್ ಕೇವಲ 65 ರನ್ ಗಳಿಸಿದ್ದರು. ಫಿಂಚ್ 10 ಪಂದ್ಯಗಳನ್ನು ಆಡಿದ್ದರೂ 134 ರನ್ ಗಳಿಸಿ ನಿರಾಸೆಗೊಳಿಸಿದ್ದರು. ಆಲ್‌ರೌಂಡರ್ ಪಟೇಲ್ ಕೇವಲ 3 ವಿಕೆಟ್ ಕಬಳಿಸಿ, 80 ರನ್ ಗಳಿಸಿದ್ದಾರೆ.

ನಾಯಕ ಆರ್.ಅಶ್ವಿನ್, ಭಾರತದ ಆರಂಭಿಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಡೇವಿಡ್ ಮಿಲ್ಲರ್, ಆ್ಯಂಡ್ರೂ ಟೈ ಹಾಗೂ ಅಫ್ಘಾನಿಸ್ತಾನದ ಆಫ್-ಸ್ಪಿನ್ನರ್ ಮುಜೀಬ್‌ವುರ್ರಹ್ಮಾನ್‌ರನ್ನು ತಂಡದಲ್ಲಿ ಉಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News