ಮೂಡಿಗೆರೆ: ಸೈಂಟ್ ಮಾರ್ಥಾಸ್ ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Update: 2018-11-16 11:44 GMT

ಮೂಡಿಗೆರೆ, ನ.16: ಇತ್ತೀಚೆಗೆ ಚಿಕ್ಕಮಗಳೂರು ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಮೂಡಿಗೆರೆ ಸೈಂಟ್ ಮಾರ್ಥಾಸ್ ಶಾಲೆಯ ವಿದ್ಯಾರ್ಥಿಗಳಾದ ಸುಸ್ವಂತ್, ಪಿ.ಕೆ.ಕಾರ್ತಿಕ್, ಮನೋಜ್, ಕಾರ್ತಿಕ್ ಇವರು ಬಾಲಕರ 100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ, ಇ.ಆರ್.ಸಂದ್ಯಾ ಅವರು 400 ಮೀ.ನಲ್ಲಿ ಪ್ರಥಮ, 200 ಮೀ. ನಲ್ಲಿ ದ್ವಿತೀಯ ಸ್ಥಾನ ಹಾಗೂ ಜನೀಟಾ ರೋಡ್ರೀಗಸ್ ಅವರು 400 ಮೀ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡಾಪಟುಗಳಿಗೆ ಸೈಂಟ್ ಮಾರ್ಥಾಸ್ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News