ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ರಚನೆ: ಅಧ್ಯಕ್ಷರಾಗಿ ಎಂ.ಬಿ.ದೇವಯ್ಯ ಆಯ್ಕೆ

Update: 2018-11-17 13:41 GMT
ಎಂ.ಬಿ.ದೇವಯ್ಯ- ಕುಂಬುಗೌಡನ ಪ್ರಸನ್ನ

ಮಡಿಕೇರಿ, ನ.17: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯ ವಿಳಂಬವಾಗುತ್ತಿರುವ ಬೆನ್ನಲ್ಲೆ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿಯೊಂದು ರಚನೆಗೊಂಡಿದೆ.

ನೂತನ ಸಮಿತಿಯ ಅಧ್ಯಕ್ಷರಾಗಿ ಎಂ.ಬಿ.ದೇವಯ್ಯ, ಕಾರ್ಯಾಧ್ಯಕ್ಷರಾಗಿ ನಾಪಂಡ ರವಿಕಾಳಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಂಬುಗೌಡನ ಪ್ರಸನ್ನ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಸ್.ಪಿ.ಪೊನ್ನಪ್ಪ, ಎ.ಟಿ.ಮಾದಪ್ಪ, ಮೋಟನಾಳಿರ ಸನ್ನಿ, ಕಾರ್ಯದರ್ಶಿಗಳಾಗಿ ಕಿಮ್ಮಡಿರ ಜಗದೀಶ, ಕೆ.ಪಿ.ಗಣಪತಿ, ಸುಭಾಷ್ ಆಳ್ವ, ಟಿ.ಎಂ.ಮೋಹನ ಆಯ್ಕೆಯಾಗಿದ್ದು, ಸದಸ್ಯರಾಗಿ ಜಿ.ಎ.ಇಬ್ರಾಹಿಂ, ಎ.ಪಿ.ಕಾವೇರಮ್ಮ, ಕೆ.ಪಿ.ಪ್ರದೀಪ್, ಕೆ.ಎಂ.ಪೆಮ್ಮಯ್ಯ, ಮಿನ್ನಂಡ ಮಿಟ್ಟು ಗಣಪತಿ, ಚೆಟ್ಟೀರ ರಾಜ ಕಾರ್ಯಪ್ಪ, ಟಿ.ಎಂ.ಮೋಹನ್, ಎನ್.ಎಂ. ಕಾಳಪ್ಪ, ಐ.ಎಸ್.ಹರೀಶ್, ವಿಶು ಪೆಮ್ಮಯ್ಯ, ಬಿ.ಎನ್.ರಮೇಶ, ಸಿ.ಸಿ. ರತನ್‍ ಕುಮಾರ್, ಮಡ್ಲಂಡ ಸೋಮಣ್ಣ, ದೇರಣ್ಣನ ದೇವಿಪ್ರಸಾದ್, ಕನ್ನಿಕಂಡ ಸುರೇಶ, ಶಾಂತೆಯಂಡ ಬೋಪಯ್ಯ, ಕಾಳಚಂಡ ಪೊನ್ನಪ್ಪ, ಶಾಂತೆಯಂಡ ಕಾವೇರಪ್ಪ, ಮಾನಡ್ಕ ದಯಾನಂದ, ಬಿದ್ದಂಡ ಮೊಣ್ಣಪ್ಪ, ಚಾಮೇರ ಪಳಂಗಪ್ಪ, ಮುಲುವೇರ ದಿನು ಬಿದ್ದಪ್ಪ, ಕೆ.ಈ.ಭರತ್, ಎಸ್.ಬಿ. ಲೋಕೇಶ, ಗಿರೀಶ್, ಬಿ.ಕೆ.ಗಾಂಧಿ, ಟಿ.ಎಂ.ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಕುಂಬುಗೌಡನ ಪ್ರಸನ್ನ ತಿಳಿಸಿದ್ದಾರೆ.

ಕಾಫಿ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸರಕಾರದ ಗಮನ ಸೆಳೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News