ಮುಂಡಗೋಡ: ಅಗ್ನಿ ಅನಾಹುತ; ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವು

Update: 2018-11-17 14:08 GMT

ಮುಂಡಗೋಡ,ನ.17: ಬೆಂಕಿ ತಗಿಲಿದ ಪರಿಣಾಮ ಸುಟ್ಟಗಾಯಗಳಿಂದ ಕಿಮ್ಸ್ ಗೆ ದಾಖಲಾಗಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ತಾಲೂಕಿನ ಸನವಳ್ಳಿ ಪ್ಲಾಟ್ ನ 7ನೇ ತರಗತಿಯ ಶಶಿಕಲಾ ಸುಣಗಾರ(13) ಮೃತ ಬಾಲಕಿ. ನ.1 ರಂದು ಬಾಲಕಿ ನೀರು ಕಾಯಿಸಲು ಒಲೆಗೆ ಸೀಮೆ ಎಣ್ಣೆ ಹಾಕಿ ಹೊತ್ತಿಸುವ ಸಂದರ್ಭ ಬೆಂಕಿಯು ಬಾಲಕಿಯ ಧರಿಸಿದ ಬಟ್ಟೆಗೆ ತಗುಲಿದೆ. ಇದರಿಂದ ಸುಟ್ಟಗಾಯಗಳಾದ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾಳೆ.

ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಡಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News