ಪಾಲಿಟೆಕ್ನಿಕ್ ಕಾಲೇಜುಗಳ ವೆಬ್ಸ್‌ಸೈಟ್ ಕನ್ನಡೀಕರಿಸಲು ಸೂಚನೆ

Update: 2018-11-17 17:02 GMT

ಬೆಂಗಳೂರು, ನ. 17: ರಾಜ್ಯದಲ್ಲಿರುವ ಎಲ್ಲ ಪಾಲಿಟೆಕ್ನಿಕ್ ಕಾಲೇಜುಗಳ ವೆಬ್ಸ್‌ಸೈಟ್ ಕನ್ನಡೀಕರಿಸಿ, ಅದರ ವರದಿಯನ್ನು ನೀಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.

ಕನ್ನಡ ಆಡಳಿತ ಭಾಷೆಯಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದನ್ನು ಎಲ್ಲರೂ ಪಾಲಿಸಬೇಕಿದೆ. ಇದೇ ರೀತಿ ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ 82 ಸರಕಾರಿ, 44 ಅನುದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್, 11 ಸರಕಾರಿ ಇಂಜಿನಿಯರಿಂಗ್, 9 ಆನುದಾನಿತ ತಾಂತ್ರಿಕ ಕಿರಿಯ ಕಾಲೇಜುಗಳ ಮಾಹಿತಿ ಕನ್ನಡದಲ್ಲಿ ಲಭ್ಯವಿದೆಯಾ, ಮುಖಪುಟ ಮತ್ತು ಒಳ ಮಾಹಿತಿಗಳು ಕನ್ನಡದಲ್ಲಿ ಇದೆಯಾ ಎಂದು ಕರ್ನಾಟಕ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಶಿಕ್ಷಣ ಇಲಾಖೆಯನ್ನು ಮಾಹಿತಿ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News