ಎ.ಎಸ್.ಪೊನ್ನಣ್ಣ ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲ

Update: 2018-11-17 17:48 GMT

ಪೊನ್ನಂಪೇಟೆ, ನ.17: ರಾಜ್ಯ ಸರಕಾರದ ಹಾಲಿ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರನ್ನು ರಾಜ್ಯ ಉಚ್ಚ ನ್ಯಾಯಾಲಯವು ಹಿರಿಯ ವಕೀಲ ಎಂದು ಘೋಷಿಸಿದೆ.

ಈ ಕುರಿತು ಅಧಿಕೃತ ಅದೇಶ ಹೊರಡಿಸಿರುವ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀಶನಂದ, ಒಟ್ಟು 18 ಜನ ಹೈಕೊರ್ಟ್ ವಕೀಲರನ್ನು ಹಿರಿಯ ವಕೀಲರನ್ನಾಗಿ ಘೋಷಿಸಿದ್ದು, ಈ ಪೈಕಿ ಎ.ಎಸ್. ಪೊನ್ನಣ್ಣ ಕೂಡ ಒಬ್ಬರಾಗಿದ್ದಾರೆ. ವಕೀಲರ ಕಾಯ್ದೆ 1961ರ ನಿಯಮ 16(2) ಮತ್ತು ಕರ್ನಾಟಕ ಹೈಕೋರ್ಟ್ ನಿಯಮ 2018 ರ 6(9) ಅನ್ವಯ ಈ ಅದೇಶ ಹೊರಡಿಸಿರುವುದಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸುಪ್ರಿಂ ಕೋರ್ಟ್ ಮತ್ತು ರಾಜ್ಯ ಹೈಕೊರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಎ.ಎಸ್.ಪೊನ್ನಣ್ಣ, ಕಳೆದ ರಾಜ್ಯ ಸರಕಾರದಲ್ಲೂ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅವರ ಪುತ್ರರಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News