ದ್ವಿರಾಷ್ಟ್ರ ಕರಾಟೆ ಚಾಂಪಿಯನ್‌ಶಿಪ್: ಕೊಡಗಿನ ಮೂವರಿಗೆ ಪ್ರಶಸ್ತಿ

Update: 2018-11-17 18:01 GMT

ಪೊನ್ನಂಪೇಟೆ, ನ.17: ದ್ವಿರಾಷ್ಟ್ರ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಪಾಲ್ಗೊಂಡಿದ್ದ ಕೊಡಗಿನ ಮೂವರು ಯುವ ಕರಾಟೆ ಪಟುಗಳಿಗೆ ಪ್ರಶಸ್ತಿ ಲಭಿಸಿದೆ.

ಇತ್ತೀಚೆಗೆ ಕೇರಳದ ಕಲ್ಲಿಕೋಟೆ ಸಮೀಪದ ನಾದಪುರಂನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೇ ಇಂಡೋ-ಶ್ರೀಲಂಕಾ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಆಲೀರ ಯು. ನಾಫೀಯಾ, ದುದ್ದಿಯಂಡ ಎಚ್. ಉವೈಸ್ ಮತ್ತು ದುದ್ದಿಯಂಡ ಎಚ್. ಮುರ್ಶಿದಾ ಅವರ ಅತ್ಯುತ್ತಮ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ದೊರೆತಿದೆ. ಚಾಂಪಿಯನ್‌ಶಿಪ್‌ನ 32ರಿಂದ 35 ಕೆ.ಜಿ.ಯವರೆಗಿನ ವಿಭಾಗದಲ್ಲಿ ಆಲೀರ ನಾಫಿಯಾ ಪ್ರಥಮ ಸ್ಥಾನ ಪಡೆದರೆ, 22 ರಿಂದ 25 ಕೆ.ಜಿ.ಯವರೆಗಿನ ವಿಭಾಗದಲ್ಲಿ ದುದ್ದಿಯಂಡ ಎಚ್. ಮುರ್ಶಿದಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪರ್ಧೆಯ 42ರಿಂದ 45 ಕೆ.ಜಿ.ಯವರೆಗಿನ ವಿಭಾಗದಲ್ಲಿ ದುದ್ದಿಯಂಡ ಎಚ್. ಉವೈಸ್ ತೃತೀಯ ಸ್ಥಾನ ಗಳಿಸಿದ್ದಾರೆ.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಈ ಮೂವರು ಕೊಡಗಿನ ವಿದ್ಯಾರ್ಥಿಗಳು, ಬೆಂಗಳೂರಿನ ಯುನಿವರ್ಸಲ್ ಮಾರ್ಷಲ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಶಾಲೆಯ ಮುಖ್ಯ ತರಬೇತುದಾರ ದುದ್ದಿಯಂಡ ಎಸ್. ಹಂಝ ಅವರ ಮಾರ್ಗದರ್ಶನಲ್ಲಿ ದ್ವಿರಾಷ್ಟ್ರ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News