ಚಿಕ್ಕಮಗಳೂರು: ನಕ್ಸಲ್ ಚಳವಳಿ ನಾಯಕ ಕೃಷ್ಣಮೂರ್ತಿ ತಂದೆ ನಿಧನ

Update: 2018-11-17 18:25 GMT

ಚಿಕ್ಕಮಗಳೂರು, ನ.17: ಜಿಲ್ಲೆಯ ಶೃಂಗೇರಿ ತಾಲೂಕಿನ ಬುಕಡಿಬೈಲ್ ಗ್ರಾಮದ ನಿವಾಸಿ ಹಾಗೂ ಭೂಗತ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಅವರ ತಂದೆ ಕಾನು ಗೋಪಾಲರಾವ್ (81) ಅವರು ಶನಿವಾರ ನಿಧನ ಹೊಂದಿದ್ದಾರೆ. 

ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡು ಕಳೆದೊಂದ ದಶಕದಿಂದ ಭೂಗತರಾಗಿರುವ ಬಿ.ಜಿ.ಕೃಷ್ಣಮೂರ್ತಿ ಅವರ ತಂದೆಯಾಗಿರುವ ಗೋಪಾಲ್‍ರಾವ್ ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಶನಿವಾರ ಮುಂಜಾನೆ ನಿಧನರಾದರೆಂದು ತಿಳಿದು ಬಂದಿದ್ದು, ಅವರು ಓರ್ವ ಮಗ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಗೋಪಾಲ್‍ರಾವ್ ಕಳೆದ ಕೆಲ ವರ್ಷಗಳಿಂದ ಕಾನ್ಸರ್ ರೋಗದಿಂದ ಬಳಲುತ್ತಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಗೋಪಲ್‍ರಾವ್ ಅವರನ್ನು ನೋಡಲು ಬಿ.ಜಿ.ಕೃಷ್ಣಮೂರ್ತಿ ಅವರು ಬರಬಹುದೆಂಬ ಶಂಕೆ ಮೇಲೆ ಕಳೆದೊಂದು ವಾರದಿಂದ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಪಹರೆಯನ್ನು ನಿಯೋಜಿಸಿತ್ತು. ಗೋಪಾಲ್‍ರಾವ್ ದಾಖಲಾಗಿದ್ದ ಆಸ್ಪತ್ರೆ ಬಳಿಯೂ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿತ್ತು. ಶನಿವಾರ ಮುಂಜಾನೆ ಗೋಪಾಲ್‍ರಾವ್ ನಿಧನರಾದ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರ ಸ್ವಗ್ರಾಮ ಬುಕಡಿಬೈಲ್‍ನ ಮನೆಯ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News