ತುಮಕೂರು: ಕೊಲೆ ಯತ್ನ ಆರೋಪಿಗೆ 5 ವರ್ಷ ಶಿಕ್ಷೆ

Update: 2018-11-17 18:36 GMT

ತುಮಕೂರು,ನ.17: ಜಗಳ ತೆಗೆದು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಜೋಸೆಫ್ ಫೆರೋಲ ಎಂಬ ವ್ಯಕ್ತಿಗೆ ಪ್ರಧಾನ ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಅವರು 5 ವರ್ಷಗಳ ತೀವ್ರ ಸ್ವರೂಪದ ಶಿಕ್ಷೆ ಮತ್ತು 25 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಸಿ.ಎಸ್.ಪುರ ಠಾಣಾ ಸರಹದ್ದಿನ ಕಲ್ಲೂರು ಗ್ರಾಮದಲ್ಲಿ ಆರೋಪಿಯು ಪ್ಲೈವುಡ್ ಶೀಟ್‍ಗೆ ಸಂಬಂಧಿಸಿದಂತೆ ನಾಗರಾಜಾಚಾರ್ ಅವರ ಮಗ ನವೀನ(38) ಎಂಬ ವ್ಯಕ್ತಿಗೆ ಚಾಕುವಿನಿಂದ ಎಡ ಪಕ್ಕೆಗೆ ತಿವಿದು ಗಾಯಂಆಡಿ, ಕೊಲೆಗೆ ಯತ್ನಿಸಿರುವುದು ವಿಚಾರಣೆಯಿಂದ ಸಾಬೀತಾಗಿರುವುದರಿಂದ ಈ ಶಿಕ್ಷೆ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 1 ವರ್ಷಗಳ ಸಾದಾ ಶಿಕ್ಷೆ ಅನುಭವಿಸುವಂತೆ ಮತ್ತು ದಂಡದ ಮೊತ್ತ 25 ಸಾವಿರ ರೂ.ಗಳಲ್ಲಿ ಗಾಯಾಳು ನವೀನ ಅವರಿಗೆ 15 ಸಾವಿರ ರೂ.ಗಳ ಪರಿಹಾರ ಕೊಡುವಂತೆ ತೀರ್ಪು ನೀಡಲಾಗಿದೆ.  

ತನಿಖಾಧಿಕಾರಿ ವಿಜಯ್‍ಕುಮಾರ್ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಕೆ.ಎಚ್. ಶ್ರೀಮತಿ ವಾದ ಮಂಡಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News