ಹನೂರು: ವಿಶೇಷ ಮಕ್ಕಳ ಗ್ರಾಮ ಸಭೆ

Update: 2018-11-18 10:58 GMT

ಹನೂರು,ನ.18: ತಾಲೂಕಿನ ದೊಡ್ಡಲ್ಲಾತ್ತೂರು ಗ್ರಾಪಂ ವ್ಯಾಪ್ತಿಯ ಕೆಂಪಯ್ಯನಹಟ್ಟಿ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ಇತ್ತೀಚೆಗೆ ಆಯೋಜಿಸಲಾಗಿತ್ತು. 

ಈ ವಿಶೇಷ ಮಕ್ಕಳ ಗ್ರಾಮ ಸಭೆಯನ್ನು ಗ್ರಾಪಂ ಅಧ್ಯಕ್ಷೆ ನೀಲಮ್ಮ ಚಿಕ್ಕಮರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಗ್ರಾಪಂ ಪಿಡಿಒ ಪುಟ್ಟುಬುದ್ದಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭ ಇತ್ತೀಚೆಗೆ ಅಕ್ಷರ ಫೌಂಡೇಷನ್ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಆಯ್ಕೆ ಮಾಡಿ ಗ್ರಾಪಂ ಆಡಳಿತ ಮಂಡಳಿ ಹೃತ್ಪೂರ್ವಕವಾಗಿ ಗೌರವಿಸಿ ಬಹಮಾನವನ್ನು ನೀಡಲಾಯಿತು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಚಿಕ್ಕಮರಿ, ಕೆಂಪಯ್ಯನಹಟ್ಟಿ ಶಾಲೆ ಮುಖ್ಯಶಿಕ್ಷಕಿ ಕೆ.ಪದ್ಮಾ, ಗ್ರಾಪಂ ಕಂದಾಯ ವಸೂಲಿಗಾರ ಕುಮಾರ್ ಮತ್ತು ಕಚೇರಿ ಸಿಬ್ಬಂದಿ ಶಾಲಾ ಶಿಕ್ಷಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News