ಮೈಸೂರು: ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿ; ಮೈಸೂರಿನ ಗ್ಲಾಡಿಯರ್ ತಂಡ ಚಾಂಪಿಯನ್

Update: 2018-11-18 18:08 GMT

ಮೈಸೂರು,ನ.18: ನಗರದಲ್ಲಿ ನಡೆದ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ಗ್ಲಾಡಿಯರ್ ತಂಡ ಬೆಂಗಳೂರಿನ ದಿವ್ಯಾಂಗ ಮೈತ್ರಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ವಿಜಯನಗರದ ಒಂದನೇ ಹಂತದಲ್ಲಿರುವ ಮುಡಾ ಕ್ರೀಡಾಂಗಣದಲ್ಲಿ ರವಿವಾರ ಫೇರ್‍ಟೆಲ್ ಹಾಗು ಸಿಬಿಎಂ ವತಿಯಿಂದ ಕಳೆದ 3 ದಿನಗಳಿಂದ ನಡೆಯುತ್ತಿದ್ದ ದಕ್ಷಿಣ ಭಾರತದ ವ್ಹೀಲ್‍ಚೇರ್ ಪಂದ್ಯಾವಳಿಯಲ್ಲಿ ಮೈಸೂರು, ಬೆಂಗಳೂರು, ಬಾಗಲಕೋಟೆ ಹಾಗು ಕೇರಳ ತಂಡಗಲು ಭಾಗವಹಿಸಿದ್ದವು. ಫೈನಲ್‍ಗೆ ಮೈಸೂರು ಗ್ಲಾಡಿಯರ್ ಹಾಗು ಬೆಂಗಳೂರು ದಿವ್ಯಾಂಗ ಮೈತ್ರಿ ತಂಡ ಲಗ್ಗೆ ಇಟ್ಟಿದ್ದವು.

ಟಾಸ್ ಗೆದ್ದು ಮೈದಾನಕ್ಕಿಳಿದ ಸುಧಾಕರ್ ನಾಯಕತ್ವದ ಬೆಂಗಳೂರು ದಿವ್ಯಾಂಗ ಮೈತ್ರಿ ತಂಡ 12 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 62 ರನ್ ಸೇರಿಸಿತ್ತು. 63 ರನ್‍ಗಳ ಗುರಿ ಬೆನ್ನತ್ತಿದ ಚಂದ್ರಕುಮಾರ್ ನಾಯಕತ್ವದ ಮೈಸುರು ತಂಡವು 12 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 63 ರನ್ ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್ ಪಂದ್ಯಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News