ಮಾಲಿನ್ಯದ ಕಣಗಳ ಮಟ್ಟದಲ್ಲಿ ದಿಲ್ಲಿಯನ್ನು ಮೀರಿಸಿದ ಕೋಲ್ಕತಾ !

Update: 2018-11-18 18:12 GMT

ಹೊಸದಿಲ್ಲಿ, ನ. 18: ಕಣಗಳ ಮಟ್ಟಕ್ಕೆ ಸಂಬಂಧಿಸಿ ಕೋಲ್ಕತಾದ ಮಾಲಿನ್ಯ ಮಟ್ಟ ವಾಯು ಮಾಲಿನ್ಯದಲ್ಲಿ ಜಾಗತಿಕವಾಗಿ ಕುಖ್ಯಾತಿ ಪಡೆದಿರುವ ದಿಲ್ಲಿಯನ್ನು ಮೀರಿಸಿದೆ. ಕಳೆದ 72 ಗಂಟೆಗಳಲ್ಲಿ ಕೋಲ್ಕತಾದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಇ) ‘ತುಂಬಾ  ಕಳಪೆ’ ಶ್ರೇಣಿಗೆ ಇಳಿದಿದೆ. ಇದು ದಿಲ್ಲಿಯಲ್ಲಿ ದಾಖಲಾದ ಮಟ್ಟವನ್ನು ಕೂಡ ದಾಟಿದೆ. ಈ ಮೂಲಕ ಕೋಲ್ಕತಾವನ್ನು ಹೆಚ್ಚು ಮಾಲಿನ್ಯ ನಗರವನ್ನಾಗಿ ಮಾಡಿದೆ.

 ನಗರದ ಎರಡು ಪ್ರಮುಖ ಸ್ಥಳಗಳಲ್ಲಿ ಒಂದಾದ ರವೀಂದ್ರನಾಥ್ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಒಟ್ಟು ಕಣ ಮಟ್ಟ 2.3 ಸಂಖ್ಯೆಯಲ್ಲಿದೆ ಎಂದು ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ ವೆಬ್‌ಸೈಟ್ ತಿಳಿಸಿದೆ. ದಿಲ್ಲಿಯ ಅತ್ಯಧಿಕ ಮಾಲಿನ್ಯ ವಲಯವೆಂದು ಪರಿಗಣಿಸಲಾದ ಅಶೋಕ್ ವಿಹಾರ್‌ಗೆ ಹೋಲಿಸಿದರೆ ಇಲ್ಲಿ ಮಾಲಿನ್ಯ ಮಟ್ಟ 381ಕ್ಕೆ ಏರಿಕೆಯಾಗಿದೆ (ಅತಿ ಕಳಪೆ). ಇದೇ ಸಂದರ್ಭ ಅಶೋಕ್ ವಿಹಾರ್‌ನಲ್ಲಿ ಮಾಲಿನ್ಯ ಮಟ್ಟ 292.5 ಇತ್ತು. ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಸರಾಸರಿ ಎಕ್ಯೂಐ 310.75 ಇತ್ತು.

ಎಕ್ಯೂಐ ಮಟ್ಟ 201-300ರ ನಡುವೆ ಇದ್ದರೆ ಕಳಪೆ, 301-400 ನಡುವೆ ಇದ್ದರೆ ತುಂಬಾ ಕಳಪೆ ಎಂದು ಪರಿಗಣಿಸಲಾಗುತ್ತದೆ. 401-500ರ ನಡುವೆ ಎಕ್ಯೂಐ ಇದ್ದರೆ ಅದನ್ನು ‘ಗಂಭೀರ’ ಎಂದು ಪರಿಗಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News