ಮಡಿಕೇರಿ: ಕೊಡವ ಸಮಾಜದ ವತಿಯಿಂದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣಗೆ ಸನ್ಮಾನ

Update: 2018-11-19 11:41 GMT

ಮಡಿಕೇರಿ, ನ.19: ಹೆಸರಾಂತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮುಂದಿನ ವರ್ಷ ಬೆಂಗಳೂರಿನಲ್ಲಿ ದೇಶದ ಟೆನ್ನಿಸ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಅಕಾಡೆಮಿ ಪ್ರಾರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಮಡಿಕೇರಿಯಲ್ಲಿ ಕೊಡವ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರೋಹನ್ ಬೋಪಣ್ಣ, ದೇಶದಲ್ಲಿ ಹಲವಾರು ಟೆನ್ನಿಸ್ ಪ್ರತಿಭೆಗಳಿದ್ದರೂ ಈ ಪ್ರತಿಭೆಗಳಿಗೆ ಸೂಕ್ತ ತರಬೇತಿಯ ಕೊರತೆ ಕಾಡುತ್ತಿದೆ. ಇದನ್ನು ಮನಗಂಡು ಮುಂದಿನ ವರ್ಷ ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಕ್ರೀಡಾ ತರಬೇತಿ ಉದ್ದೇಶದಿಂದ ಕ್ರೀಡಾ ಅಕಾಡೆಮಿಯನ್ನು ಪ್ರಾರಂಭಿಸಲು ಸಿದ್ದತೆ ಕೈಗೊಂಡಿರುವುದಾಗಿ ತಿಳಿಸಿದರು.

ಕೊಡಗಿನಲ್ಲಿ ಆದ ಪ್ರಕೃತಿ ವಿಕೋಪ ಸಂದರ್ಭ ದೇಶದ ಹಲವೆಡೆಗಳಿಂದ ಪರಿಹಾರ ಸಾಮಾಗ್ರಿಗಳೊಂದಿಗೆ ಆರ್ಥಿಕ ಸಹಾಯವನ್ನು ನೀಡುವ ಮೂಲಕ ಕೊಡಗಿನ ಸಂತ್ರಸ್ಥರಿಗೆ ಜನತೆ ನೆರವು ನೀಡಿದ್ದನ್ನು ಸ್ಮರಿಸಿಕೊಂಡ ರೋಹನ್ ಬೋಪಣ್ಣ, ಕೊಡಗು ಮತ್ತೆ ತನ್ನ ಗತವೈಭವವನ್ನು ಶೀಘ್ರವೇ ಮರಳಿ ಪಡೆಯುವಂತಾಗಲಿ ಎಂದು ಹಾರೈಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News