ತುಮಕೂರು: ಎಸಿಬಿ ಬಲೆಗೆ ಬಿದ್ದ ಪಾಲಿಕೆ ಎಇಇ

Update: 2018-11-20 18:41 GMT

ತುಮಕೂರು,ನ.20: ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದ ಗುತ್ತಿಗೆದಾರನ ಬಿಲ್ ಗೆ ಸಹಿಹಾಕಲು ಗುತ್ತಿಗೆ ದಾರರಿಂದ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೀಸಿದ ಬಲೆಗೆ ಪಾಲಿಕೆ ಎಇಇ ಬಿದ್ದ ಘಟನೆ ನಗರದಲ್ಲಿ ನಡೆದಿದೆ.

ತುಮಕೂರು ತಾಲೂಕಿನ ಕೋರ ಹೋಬಳಿಯ ನಿವಾಸಿಯಾಗಿದ್ದ ಗುತ್ತಿಗೆದಾರರು ತಮ್ಮ ಠೇವಣಿ ಮೊತ್ತವನ್ನು ವಾಪಸ್ಸು ಪಡೆಯಲು ತುಮಕೂರು ಮಹಾನಗರ ಪಾಲಿಕೆಯ ಎಇಇ ಮರಿಯಪ್ಪ ಅವರ ಬಳಿ ಹೋದಾಗ ಅವರು ಬಹಳ ದಿನ ಸತಾಯಿಸಿ ಕೊನೆಗೆ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಹಣ ನೀಡದೇ ಸಹಿ ಹಾಕುವುದಿಲ್ಲ ಎಂದು ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ.

ಈ ಸಂಬಂದ ಗುತ್ತಿಗೆ ದಾರ ಎಸಿಬಿಗೆ ದೂರು ನೀಡಿದ ಹಿನ್ನಲೆಯಲ್ಲಿ ಮಂಗಳವಾರ ಎಸಿಬಿ ಎಸ್ಪಿ ಬಡಿಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪಾಲಿಕೆ ಆವರಣದಲ್ಲಿ ಬೀಡು ಬಿಟ್ಟು ಪಾಲಿಕೆಯ ಎಇಇ ಮರಿಯಪ್ಪ ಗುತ್ತಿಗೆ ದಾರನಿಂದ 10 ಸಾವಿರ ಲಂಚದ ಹಣವನ್ನು ಪಿರ್ಯಾದುದಾರರಿಂದ ಪಡೆದುಕೊಳ್ಳುವ ವೇಳೆಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಹಣ ಸ್ವೀಕರಿಸಿದ ವೇಳೆಯಲ್ಲಿ ಪಾಲಿಕೆಯ ಎಇಇ ಮರಿಯಪ್ಪ ಅವರನ್ನು ಅಧಿಕಾರಿಗಳು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿ ಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News