ಮೊದಲ ಟ್ವೆಂಟಿ-20: ಭಾರತದ ಗೆಲುವಿಗೆ 174 ರನ್ ಗುರಿ

Update: 2018-11-21 11:23 GMT

  ಬ್ರಿಸ್ಬೇನ್, ನ.21: ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ಗೆಲುವಿಗೆ 17 ಓವರ್‌ಗಳಲ್ಲಿ 174 ರನ್ ಗುರಿ ಪಡೆದಿದೆ.

  ಆಸ್ಟ್ರೇಲಿಯ 16.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 153ರ ನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಪಂದ್ಯ ನಿಂತ ಬಳಿಕ ಇನ್ನೊಂದು ಓವರ್ ಆಡಿದ ಆಸ್ಟ್ರೇಲಿಯ 17 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.

 ಭಾರತಕ್ಕೆ ಗೆಲ್ಲಲು ಪರಿಷ್ಕೃತ ಸವಾಲು ನೀಡಲಾಗಿದ್ದು, 11 ಓವರ್ ಅಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 96 ರನ್ ಗಳಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್(ಔಟಾಗದೆ 68,39 ಎಸೆತ)ಏಕಾಂಗಿ ಹೋರಾಟ ನೀಡುತ್ತಿದ್ದಾರೆ.

ಆಲ್‌ರೌಂಡರ್ ಮ್ಯಾಕ್ಸ್‌ವೆಲ್(46,24 ಎಸೆತ, 4 ಸಿಕ್ಸರ್) ಹಾಗೂ ಸ್ಟೋನಿಸ್(33,19 ಎಸೆತ, 3 ಬೌಂಡರಿ, 1 ಸಿಕ್ಸರ್)ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಗಳಿಸಿದ್ದಾರೆ. ನಾಯಕ ಫಿಂಚ್(27) ಹಾಗೂ ಲಿನ್(37) 2ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News