ಮೂಡಿಗೆರೆಯಲ್ಲಿ ಸಂಭ್ರಮದ ಈದ್ ಮಿಲಾದ್

Update: 2018-11-21 11:28 GMT

ಮೂಡಿಗೆರೆ, ನ.21:  ಪಟ್ಟಣದಲ್ಲಿ ಮುಸ್ಲಿಮರು ಮೀಲಾದುನ್ನಬಿ ಹಬ್ಬವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಿದರು.  

ಮೆರವಣಿಗೆಯಲ್ಲಿ ಮಕ್ಕಾ, ಮದೀನಾಗಳ ಸ್ತಬ್ದಚಿತ್ರದ ಪ್ರದರ್ಶನ ನಡೆಯಿತು. ಪುಟಾಣಿ ಮಕ್ಕಳು ಹಾಗೂ ಹಿರಿಯರು ಬಣ್ಣ ಬಣ್ಣದ ವಸ್ತ್ರಗಳನ್ನು ಧರಿಸಿ ಗಮನ ಸೆಳೆದರು. ಹಬ್ಬದ ಅಂಗವಾಗಿ ಮಸೀದಿಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.  

ಪಟ್ಟಣ ಸೇರಿದಂತೆ ಬಿಳಗುಳ, ಹ್ಯಾಂಡ್‍ಪೋಸ್ಟ್ ಕೃಷ್ಣಾಪುರ, ಭೂತನಕಾಡು, ಕಸ್ಕೇಬೈಲ್, ಚಕ್ಕಮಕ್ಕಿ, ಕೊಟ್ಟಿಗೆಹಾರ, ಹಂಡುಗುಳಿ, ಅಣಜೂರು ಮತ್ತಿತರೆ ಮಸೀದಿಗಳಲ್ಲಿ ಈದ್‍ಮಿಲಾದ್ ಅಂಗವಾಗಿ ದಫ್ ಪ್ರದರ್ಶನ, ಗಾಯನ, ಪ್ರವಾದಿ ಸಂದೇಶ, ಮೌಲೀದ್ ಪಾರಾಯಣ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News