ಕೊಳ್ಳೇಗಾಲ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್.ಮಹೇಶ್ ಚಾಲನೆ

Update: 2018-11-23 12:11 GMT

ಕೊಳ್ಳೇಗಾಲ,ನ.23: ತಾಲೂಕಿನ ಕುರುಬನಕಟ್ಟೆ ದೇವಾಲಯ ಮುಂಭಾಗದ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.

ಕುರುಬನಕಟ್ಟೆಯ ದ್ವಾರದಿಂದ ಸುಮಾರು 180 ಮೀ ಉದ್ದ ಮತ್ತು 6 ಮೀ ಅಗಲದ ರಸ್ತೆಗೆ ಶಾಸಕರ ಅನುದಾನದಲ್ಲಿ ಸುಮಾರು 16 ಲಕ್ಷ ವೆಚ್ಚದಲ್ಲಿ ಇಂಟರ್‍ಲಾಕ್ ಟೈಲ್ಸ್ ಅಳವಡಿಕೆಗೆ ಶಾಸಕರು ಶಿಲಾನ್ಯಾಸ ನೇರೆವೆರಿಸಿದರು.

ನಂತರ ಮಾತನಾಡಿದ ಅವರು, ಮಂಟೇಸ್ವಾಮಿ ಪರಂಪರೆವುಳ್ಳ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇತಿಹಾಸ ಪರಂಪರೆವುಳ್ಳ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕುರುಬನಕಟ್ಟೆ ಮಠದ ವರುಣರಾಜೇ ಅರಸ್, ಜಿ.ಪಂ ಸದಸ್ಯ ಮುಳ್ಳೂರು ಕಮಲ್, ತಾ.ಪಂ ಸದಸ್ಯ ಮರಿಸ್ವಾಮಿ, ಮಾಜಿ ಸದಸ್ಯ ಪುಟ್ಟಣ್ಣ, ಗಣಿಉದ್ಯಮಿ ವೀರಮಾದು, ತಿಮ್ಮರಾಜೀಪುರ ಗ್ರಾ.ಪಂ ಅಧ್ಯಕ್ಷೆ ಅಶ್ವಿನಿರಾಚಪ್ಪ, ಸದಸ್ಯ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಎಡಿ ಚಿನ್ನಪ್ಪ, ನಿರ್ಮಿತಿ ಕೇಂದ್ರದ ಎಇ ಪ್ರತಾಪ್‍ಕುಮಾರ್, ಚಿಕ್ಕಲ್ಲೂರು ಮಠದ ವ್ಯವಸ್ಥಾಪಕ ಬಸವರಾಜು ಸೇರಿದಂತೆ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News