3 ಕೋಟಿ ರೂ. ಹಣ ದುರ್ಬಳಕೆ: ದೇವಸ್ಥಾನದ ಮಾಜಿ ಅಧ್ಯಕ್ಷನ ವಿರುದ್ಧ ಪ್ರಕರಣ

Update: 2018-11-24 18:32 GMT

ಥಾಣೆ, ನ.24: ಥಾಣೆ ಜಿಲ್ಲೆಯ ಪ್ರಸಿದ್ಧ ವಜ್ರೇಶ್ವರಿ ದೇವಸ್ಥಾನದಲ್ಲಿ 3.22 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮನೋಜ್ ಪ್ರಧಾನ್ ನಾಪತ್ತೆಯಾಗಿದ್ದು ಈತನ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ. ಪ್ರಧಾನ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಮಾಜಿ ಅಧ್ಯಕ್ಷನೂ ಆಗಿದ್ದಾನೆ ಎಂದು ಜಿಲ್ಲಾ ಗ್ರಾಮೀಣ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗದ ಎಸ್‌ಐ ತಿಳಿಸಿದ್ದಾರೆ.

ಶ್ರೀ ವಜ್ರೇಶ್ವರಿ ಯೋಗಿನಿ ದೇವಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷನಾಗಿದ್ದ ಸಂದರ್ಭ, 2014ರ ಫೆಬ್ರವರಿಯಿಂದ 2017ರ ಮಾರ್ಚ್‌ವರೆಗಿನ ಅವಧಿಯಲ್ಲಿ ಪ್ರಧಾನ್ 3.22 ಕೋಟಿ ರೂ. ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಲೆಕ್ಕಪತ್ರ ಪರಿಶೋಧನೆಯ ಸಂದರ್ಭ ಬೆಳಕಿಗೆ ಬಂದಿದೆ. ಅವಧಿ ಮುಗಿದ ಫಿಕ್ಸೆಡ್ ಡಿಪಾಸಿಟ್‌ಗಳ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಪ್ರಧಾನ್, ಫಿಕ್ಸೆಡ್ ಡಿಪಾಸಿಟ್‌ಗಳನ್ನು ಬ್ಯಾಂಕ್‌ನ ಮತ್ತೊಂದು ಶಾಖೆಯಲ್ಲಿ ನವೀಕರಿಸಿ ಇಡಲಾಗಿದೆ ಎಂದು ಪುಸ್ತಕದಲ್ಲಿ ನಮೂದಿಸಿದ್ದು. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಹಾಲಿ ಅಧ್ಯಕ್ಷ ಕಲ್ಪೇಶ್ ಪಾಟೀಲ್ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News