ತುಮಕೂರು: ಶಸ್ತ್ರಚಿಕಿತ್ಸೆ ಬಳಿಕ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

Update: 2018-11-27 18:35 GMT

ತುಮಕೂರು,ನ.27: ನಿರ್ಮಾಣ ಹಂತದ ಆಸ್ಪತ್ರೆಯಲ್ಲಿ ಮಹಿಳೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ನಿರ್ಲಕ್ಷದಿಂದ ಮಹಿಳೆ ಸಾವನ್ನಪ್ಪಿದ್ದಾರೆನ್ನಲಾದ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ರಾಜಲಕ್ಷ್ಮೀ ನರ್ಸಿಂಗ್ ಹೊಂ ನಲ್ಲಿ ಘಟನೆ ನಡೆದಿದ್ದು, ನೆಲಮಂಗಲ ತಾಲೂಕಿನ ಹಳೆ ನಿಜಗಲ್ ಗ್ರಾಮದ ವಸಂತ (32)ಮೃತ ಪಟ್ಟಿದ್ದಾಳೆ.

ಅಪೇಂಡಿಕ್ಸ್ ನಿಂದ ಬಳಲುತ್ತಿದ್ದ ವಸಂತ 21 ರಂದು ರಾಜಲಕ್ಷ್ಮೀ ನರ್ಸಿಂಗ್ ಹೊಂಗೆ ದಾಖಲಾಗಿದ್ದಳು. ಸೋಮವಾರ ಮಧ್ಯಾಹ್ನ ಡಾ.ನರೇಂದ್ರ ಅಪೇಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದರು.ಆಸ್ಪತ್ರೆಯಲ್ಲಿ ಐಸಿಯು ಇಲ್ಲದ ಕಾರಣ ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಸಂಜೆ ವೇಳೆಗೆ ಉಸಿರಾಟದ ಸಮಸ್ಯೆಯಾಗಿದ್ದು, ಚಿಕಿತ್ಸೆ ನೀಡದೇ ಟಿಎಚ್‍ಎಸ್ ಆಸ್ಪತ್ರೆಗೆ ವರ್ಗಾಯಿಸಿದ್ದರು. ಟಿಹೆಚ್‍ಎಸ್ ಆಸ್ಪತ್ರೆಗೆ ತೆರಳುತ್ತಿದ್ದಂತೆ ವಸಂತ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ವೈದ್ಯರ ನಿರ್ಲಕ್ಷ ದಿಂದ ವಸಂತಾ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ವಸಂತ ಬಡವರಾಗಿದ್ದು ವೈದ್ಯರ ಎಡವಟ್ಟಿನಿಂದ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ಪೋಷಕರು ಮಕ್ಕಳ ಜೀವನೊಪಾಯಕ್ಕಾಗಿ ಪರಿಹಾರ ನೀಡುವಂತೆ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲಿಸರು ಎರಡು ಆಸ್ಪತ್ರೆಗಳಿಗೆ ಬಿಗಿ ಪೊಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು. ರಾಜಕೀಯ ಮುಖಂಡರು, ಪೊಲೀಸರು ಹಾಗೂ ವೈದ್ಯರು ಪೋಷಕರನ್ನು ಮನವೊಲಿಸಿ ಸಂದಾನ ಯತ್ನ ನಡೆಸಿದರು. ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News