ಮೈತ್ರಿ ಸರ್ಕಾರಕ್ಕೆ ಪತನದ ಭೀತಿ ಇಲ್ಲ: ಕುಮಾರಸ್ವಾಮಿ

Update: 2018-11-30 18:44 GMT

ಹನೂರು,ನ.30: ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಮಲೈಮಹದೇಶ್ವರ ಆರ್ಶೀವಾದ ಇರುವುದರಿಂದ ಐದು ವರ್ಷಗಳ  ಕಾಲ ಸುಭದ್ರವಾಗಿ ಆಡಳಿತ ನಡೆಸಲಿದೆ. ಯಾವುದೇ ಕಾರಣಕ್ಕೂ ಸರ್ಕಾರದ ಪತನದ ಭೀತಿ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.

ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳವಾದ ಮಲೈಮಹದೇಶ್ವರ ಬೆಟ್ಟಕ್ಕೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದ್ದು ಸರ್ಕಾರ ಪತನಗೂಳ್ಳಲಿದೆ ಎಂಬುವುದು ಮಾದ್ಯಮಗಳ ಕಲ್ಪನೆ. ಡಿ.ಕೆ ಶಿವಕುಮಾರ್ ಮತ್ತು ಬಿ.ಎಸ್ ಯಡ್ಡಿಯೂರಪ್ಪರವರ ಭೇಟಿ ಸೌಹಾರ್ದಯುತವಾಗಿದ್ದು, ನಿನ್ನೆಯೇ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ  ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದರು.

ನಂತರ ಮಮ ಬೆಟ್ಟದಲ್ಲಿ ಶ್ರೀ ಮಲೈಮಹದೇಶ್ವರ ಕ್ಷೇತ್ರಾಭಿವೃಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಜೇನುಮಲೆ ವಸತಿ ಗೃಹ ಮತ್ತು ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿರು.

ಇದೇ ಸಂದರ್ಭದಲ್ಲಿ ಚಾಮರಾಜನಗರ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜು, ಕೊಡುಗು ಉಸ್ತುವಾರಿ ಸಚಿವ ಸಾ.ರಾ ಮಹೇಶ್, ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ, ಸಂಸದ ದ್ರುವನಾರಾಯಣ್, ಶಾಸಕರಾದ ಆರ್.ನರೇಂದ್ರ, ಎನ್ ಮಹೇಶ್, ನಿರಂಜನ್‍ಕುಮಾರ್ , ಸುತ್ತೂರು ಮಹಾಸಂಸ್ಥಾಪನ ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನ ಡಾ.ಶ್ರೀ ನಿರ್ಮಾಲನಂದನಾಥ ಮಹಾಸ್ವಾಮಿ, ಅಖಿಲ ಭಾರತ ವೀರಾಶೈವ ಮಹಾಸಭಾದ ಅದ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಂಠೇಗೌಡ ಮರೀತಿಬ್ಬೆಗೌಡ, ಜಿಪಂ ಅಧ್ಯಕ್ಷ ಶಿವಮ್ಮ, ಜಿಪಂ ಸದಸ್ಯರು, ಜಿಲ್ಲಾಧಿಕಾರಿ, ಕಾವೇರಿ ಪ್ರಾಧಿಕಾರಿದ ಕಾರ್ಯದರ್ಶಿ ಗಾಯತ್ರಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News