ಮೂಡಿಗೆರೆ: ಕಾಫಿತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

Update: 2018-12-02 07:25 GMT

ಚಿಕ್ಕಮಗಳೂರು, ಡಿ.2: ಕಾಫಿತೋಟದಲ್ಲಿ ಕಾಡುಕೋಣ ಕಾಣಿಸಿಕೊಂಡ ಘಟನೆ ಮೂಡಿಗೆರೆ ತಾಲೂಕಿನ ದುಂಡುಗ ಗ್ರಾಮದಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ದುಂಡುಗ ಗ್ರಾಮದ ಪ್ರಮೋದ್ ಎಂಬವರ ಕಾಫಿ ಎಸ್ಟೇಟ್‌ನಲ್ಲಿ ಕಾಡುಕೋಣ ಪ್ರತ್ಯಕ್ಷಗೊಂಡಿದೆ. ಭಾರೀ ಗಾತ್ರದ ಕೋಣವನ್ನು ಕಂಡು ಕೂಲಿ ಕಾರ್ಮಿಕರು ಬೆದರಿದ್ದಾರೆ.

ಮಲೆನಾಡಿನಲ್ಲಿ ಕಳೆದೊಂದು ವರ್ಷದಿಂದ ಆಗಾಗ್ಗೆ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News