ಭಿನ್ನ ಸಾಮರ್ಥ್ಯದ ಮಕ್ಕಳ ಪುಸ್ತಕಗಳು, ಸಮವಸ್ತ್ರಗಳ ಖರ್ಚನ್ನು ಭರಿಸಲಿರುವ ಸರಕಾರ

Update: 2018-12-02 15:57 GMT

ಹೊಸದಿಲ್ಲಿ,ಡಿ.2: ಭಿನ್ನ ಸಾಮರ್ಥ್ಯದ ಮಕ್ಕಳ ಪುಸ್ತಕಗಳು,ಸಮವಸ್ತ್ರಗಳು ಮತ್ತು ಪ್ರಯಾಣದ ವೆಚ್ಚಗಳನ್ನು ಸರಕಾರವೇ ಭರಿಸಲಿದೆ ಎಂದು ದೇಶದಲ್ಲಿಯ ಎಲ್ಲ ಶಾಲೆಗಳಿಗೆ ತನ್ನ ಸಚಿವಾಲಯವು ತಿಳಿಸಿದೆ ಎಂದು ಸಹಾಯಕ ಮಾನವ ಅಭಿವೃದ್ಧಿ ಸಂಪನ್ಮೂಲ ಸಚಿವ ಸತ್ಯಪಾಲ ಸಿಂಗ್ ಅವರು ರವಿವಾರ ಇಲ್ಲಿ ತಿಳಿಸಿದರು. ಪ್ರತಿ ಹೆಣ್ಣುಮಗುವಿಗೆ ಮಾಸಿಕ 200 ರೂ.ಗಳನ್ನು ನೀಡಲಾಗುವುದು ಎಂದೂ ಅವರು ತಿಳಿಸಿದರು.

ಹೆಲೆನ್ ಕೆಲ್ಲರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಭಿನ್ನ ಸಾಮರ್ಥ್ಯದ ಜನರಿಗೆ ಸೌಜನ್ಯ ಮತ್ತು ಅನುಕಂಪ ಮಾತ್ರವಲ್ಲ,ಶಿಕ್ಷಣದ ಮೂಲಕ ದೊರೆಯುವ ನಿಜವಾದ ಸಬಲೀಕರಣವೂ ಅಗತ್ಯವಾಗಿದೆ. ಇದನ್ನು ಸಾಧ್ಯವಾಗಿಸುವುದು ದೊಡ್ಡ ಸವಾಲು ಆಗಿದೆ. ದೇಶದಲ್ಲಿ ಭಿನ್ನ ಸಾಮರ್ಥ್ಯದ ಸುಮಾರು 12 ಮಿಲಿಯನ್ ಜನರಿದ್ದಾರೆ ಮತ್ತು ಈ ಪೈಕಿ ಶೇ.1ರಷ್ಟು ಮಾತ್ರ ಶಾಲೆಗಳಿಗೆ ಹೋಗುತ್ತಿದ್ದಾರೆ ಎಂದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಶೇ.5ರಷ್ಟು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಪ್ರವೇಶ ದೊರೆಯಬೇಕು ಎಂದು ಸರಕಾರವು ನಿರ್ದೇಶಗಳನ್ನು ನೀಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News