ಅಂತರ್ಜಾಲದ ಮೂಲಕ ಸಾಲ ಮನ್ನಾ ಮಾಹಿತಿ

Update: 2018-12-03 18:41 GMT

ಬೆಂಗಳೂರು, ಡಿ.3: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಸಾಲ ಮನ್ನಾ ಯೋಜನೆಯ ಸಾಲ ಮನ್ನಾದ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಸಾಲ ಮನ್ನಾ ಆಗಿದ್ದರೆ ಅದನ್ನು ತಿಳಿಯಲು ಹೊಸದೊಂದು ಅವಕಾಶ ಇದೀಗ ನಿಮಗೆ ಲಭಿಸಿದೆ. ಅಂತರ್ಜಾಲ ತಾಣದ ಮೂಲಕ ಇದೀಗ ಯಾರು ಬೇಕಾದರೂ ಋಣಮುಕ್ತ ಮಾಹಿತಿಯನ್ನು ಪಡೆಯಬಹುದಾಗಿದ್ದು, ಅದಕ್ಕಾಗಿ ರಾಜ್ಯ ಸರಕಾರ ವಿಶೇಷ ವೆಬ್‌ಸೈಟ್ ಆರಂಭಿಸಿದೆ.

ರೈತರ ಸಾಲ ಮನ್ನಾ ಆಗಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಮೊದಲು ನಿಮ್ಮ ಹೆಸರು, ಸಾಲ ಪಡೆದ ಬ್ಯಾಂಕ್‌ನ ಹೆಸರು, ಬ್ಯಾಂಕ್‌ನ ಶಾಖೆಯ ಹೆಸರು ನಮೂದಿಸಿ, ನಂತರ Export To ಅನ್ನು ಒತ್ತಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಐಡಿ ಅಥವಾ ಹೆಸರು ಹುಡುಕಿ. ಈ ಪಟ್ಟಿಯಲ್ಲಿ ಹೆಸರು ಇದ್ದರೆ ಸಾಲ ಮನ್ನಾ ಆಗಿದೆ ಎಂದು ತಿಳಿಯಿರಿ. http://clws. karnataka. gov.in ಈ ಲಿಂಕ್‌ನ್ನು ಬಳಸಿ, ಸಾಲ ಮನ್ನಾ ಆಗಿರುವ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News