ಯುಟ್ಯೂಬ್ ಸೆನ್ಸೇಷನ್ ಶತಾಯುಷಿ ಮಸ್ತಾನಮ್ಮ ಇನ್ನಿಲ್ಲ

Update: 2018-12-05 11:31 GMT

ವಿಜಯವಾಡ, ಡಿ.5: ಯುಟ್ಯೂಬ್ ಪಾಕ ಪ್ರವೀಣೆ, ಕರ್ರೆ ಮಸ್ತಾನಮ್ಮ ತಮ್ಮ 107ನೇ ವಯಸ್ಸಿನಲ್ಲಿ ಹುಟ್ಟೂರಾದ ಗುಂಟೂರು ಜಿಲ್ಲೆಯ ತೆನಾಲಿ ಮಂಡಲದ ಗುಡಿವಾಡ ಗ್ರಾಮದಲ್ಲಿ ಸೋಮವಾರ ನಿಧನರಾಗಿದ್ದಾರೆ. ಯುಟ್ಯೂಬಿನ ಅತ್ಯಂತ ಹಿರಿಯ ಸ್ಟಾರ್ ಆಗಿದ್ದ ಮಸ್ತಾನಮ್ಮ ಕಳೆದ ಆರು ತಿಂಗಳುಗಳಿಂದ ಅಸೌಖ್ಯದಿಂದಿದ್ದರು.

ಆಕೆಯ ಯುಟ್ಯೂಬ್ ಚಾನಲ್ ಕಂಟ್ರಿ ಫುಡ್ಸ್‍ಗೆ 12.18 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ಸ್ ಇದ್ದಾರೆ. ಅವರ ಪಾಕಪ್ರಾವೀಣ್ಯತೆ ಹಾಗೂ ವೀಡಿಯೋಗಳು ವೈರಲ್ ಆದ ನಂತರ ಕಳೆದೆರಡು ವರ್ಷಗಳಲ್ಲಿ ಆಕೆಯ ಚಾನೆಲ್ ಚಂದಾದಾರರ ಸಂಖ್ಯೆ ದ್ವಿಗುಣಗೊಂಡಿತ್ತು. ಮುಖ್ಯವಾಗಿ ಎಲ್ಪಿಜಿ ಉಪಯೋಗಿಸದೆ ಹಿಂದಿನ ಪದ್ಧತಿಯಂತೆ ಕಟ್ಟಿಗೆ ಉಪಯೋಗಿಸಿ ತೆರೆದ ಸ್ಥಳದಲ್ಲಿ ಅಡುಗೆ ಮಾಡುತ್ತಿದ್ದ ಆಕೆಯ ವಿಧಾನ ಹಲವರಿಗೆ ಮೆಚ್ಚುಗೆಯಾಗಿತ್ತು.

ತನ್ನ 22ನೇ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡಿದ್ದ ಮಸ್ತಾನಮ್ಮರ ಐದು ಮಂದಿ ಮಕ್ಕಳಲ್ಲಿ ನಾಲ್ಕು ಮಂದಿ ಕಾಲರಾ ಮಹಾಮಾರಿಗೆ ಬಲಿಯಾಗಿದ್ದರು. ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಮಸ್ತಾನಮ್ಮರ ಮೊಮ್ಮಗ ಲಕ್ಷ್ಮಣ್ ಗುಂಟೂರಿನಲ್ಲಿ ರೆಸ್ಟಾರೆಂಟ್ ಒಂದನ್ನು ತೆರೆದು ಅಲ್ಲಿ ಆಕೆಯ ಅಡುಗೆಯನ್ನು ಗ್ರಾಹಕರಿಗೆ ಉಣ ಬಡಿಸಿದಾಗ ಮಸ್ತಾನಮ್ಮ ಊರಿನಾಚೆಗೂ ಜನಪ್ರಿಯರಾಗಿದ್ದರು. ಮುಂದೆ ಲಕ್ಷ್ಮಣ್ ಕಂಟ್ರಿ ಫುಡ್ಸ್ ಯುಟ್ಯೂಬ್ ಆರಂಭಿಸಿದಾಗ ಮಸ್ತಾನಮ್ಮ ಇಂಟರ್ನೆಟ್ ಸೆನ್ಸೇಶನ್ ಆಗಿ ಬಿಟ್ಟಿದ್ದರು.

ಆಕೆ ತಯಾರಿಸುತ್ತಿದ್ದ ಕೆಲವೊಂದು ಖಾದ್ಯಗಳಾದ ವಾಟರ್ ಮೆಲನ್ ಚಿಕನ್, ಎಮು ಎಗ್ ಕರ್ರಿ, ಸ್ಕ್ರ್ಯಾಂಬಲ್ಡ್ ಎಗ್ಸ್ ಹಾಗೂ ತೆಲುಗು ಶೈಲಿಯ ಬದನೆ ಪಲ್ಯ ಹಿಟ್ ಆಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News