ಮೈಸೂರು: ಕಬ್ಬಿಣ ತುಂಬಿದ್ದ ಗೂಡ್ಸ್ ಆಟೊ ಢಿಕ್ಕಿ; ಹಸು ಸಾವು

Update: 2018-12-05 17:12 GMT

ಮೈಸೂರು,ಡಿ.5: ಕಬ್ಬಿಣ ತುಂಬಿದ್ದ ಗೂಡ್ಸ್ ಆಟೋ ಢಿಕ್ಕಿಯಾಗಿ ಹಸು ಸಾವನ್ನಪ್ಪಿದ ಘಟನೆ ಮೈಸೂರಿನ ಬನ್ನೂರು ರಸ್ತೆಯಲ್ಲಿ ನಡೆದಿದೆ.

ರಸ್ತೆ ದಾಟುವಾಗ ಗೂಡ್ಸ್ ಆಟೋಗೆ ಹಸು ಅಡ್ಡ ಬಂದಿದ್ದು, ಈ ವೇಳೆ ಆಟೋದಲ್ಲಿದ್ದ ಕಬ್ಬಿಣದ ರಾಡ್ ಹಸುವಿನ ಹೊಟ್ಟೆಗೆ ಚುಚ್ಚಿದೆ. ಪರಿಣಾಮ ರಸ್ತೆ ಮಧ್ಯೆದಲ್ಲೇ ಒದ್ದಾಡಿ ಹಸು ಸಾವನ್ನಪ್ಪಿದೆ.

ಮೈಸೂರು-ಬನ್ನೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಲನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News