ಹನೂರು: ಅಕ್ರಮ ಮದ್ಯ ಸಾಗಾಟ; ಆರೋಪಿ ಬಂಧನ

Update: 2018-12-06 18:25 GMT

ಹನೂರು,ಡಿ.6: ಅಕ್ರಮವಾಗಿ ಮದ್ಯ ಬಾಟಲಿಗಳನ್ನು ಸಾಗಿಸುತ್ತಿದ್ದ ಓರ್ವನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮಂಗಲ ಗ್ರಾಮದ ದೊಡ್ಡಸಿದ್ದಯ್ಯ ಬಂಧಿತ ಆರೋಪಿ. ಈತ ವಿವಿಧ ಗ್ರಾಮದಲ್ಲಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹನೂರು ಬಾರೊಂದರಿಂದ ಮದ್ಯೆ ಪೌಚ್‍ಗಳನ್ನು ಸಾಗಿಸುತ್ತಿದ್ದ ವೇಳೆ ಮಂಗಲ ಬಸ್ ನಿಲ್ದಾಣದಲ್ಲಿ ಹನೂರು ಪೋಲಿಸರು ಬಂಧಿಸಿದ್ದಾರೆ. ಈತನಿಂದ ಒಟ್ಟು 55 ಪೌಚ್‍ಗಳನ್ನು ವಶ ಪಡಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News